Uncategorized

ಶೌಚಾಲಯವಿದ್ರೂ ಜನರಿಗೆ ಮಾತ್ರ ಉಪಯೋಗವಾಗ್ತಿಲ್ಲ..!

Published

on

ಅರಕಲಗೂಡು: ತಾಲ್ಲೂಕು ಕಛೇರಿ ಆವರಣದಲ್ಲಿ ಹಲವಾರು ವರ್ಷಗಳಿಂದ ಸಾರ್ವಜನಿಕರಿಗೆ ಉಪಯೋಗಕ್ಕೆ ಬರದೆ ಹದಗೆಟ್ಟಿರುವ ಶೌಚಾಲಯವನ್ನು ಸ್ವಚ್ಚಗೊಳಿಸುವಂತೆ ತಾಲ್ಲೂಕು ಕಚೇರಿ ಅಧಿಕಾರಿಗೆ ಪಂಚಾಯತಿ ಮುಖ್ಯಾಧಿಕಾರಿ ಬಸವರಾಜು ತಿಳಿಸಿದ್ದರು. ತಾಲ್ಲೂಕು ಕಚೇರಿಗೆ ಬಂದು ಹೋಗವ ಸಾರ್ವಜನಿಕರಿಗೆ ಉಪಯೋಗವಾಗಬೇಕಾದ ಶೌಚಾಲಯ ಕಟ್ಟಡ ಸರಿಯಾದ ನಿರ್ವಹಣೆ ಇಲ್ಲದೆ ತಾಲ್ಲೂಕು ಆಡಳಿತದ ನಿರ್ಲಕ್ಷ್ಯದಿಂದ ಹಲವಾರು ವರ್ಷಗಳಿಂದ ಶೌಚಾಲಯದ ಕಟ್ಟಡ ಹದಗೆಟ್ಟಿ ನಿಂತಿತ್ತು ನಂತರ ಕಾಲಕ್ರಮೇಣ ಕಟ್ಟಡದ ಸುತ್ತಮುತ್ತ ಗಿಡಗಡ್ಡೆ ಬೆಳೆದು ಹಾವು, ಹಲ್ಲಿ ಸಂಚಾರದ ತಾಣವಾಗಿತ್ತು. ಇದನ್ನು ಗಮನಿಸಿದ ನಾಗರೀಕರು ಶೌಚಾಲಯದ ನಿರ್ವಹಣೆ ಕುರಿತು ವಿರೋಧ ವ್ಯಕ್ತಪಡಿಸಿದರು. ಶಾಸಕರ ಆದೇಶದಂತೆ ಪಟ್ಟಣ ಪಂಚಾಯತಿ ಪೌರ ಕಾರ್ಮಿಕರ ಸಹಾಯದಿಂದ ಇಂದು ಸ್ವಚ್ಛತೆಗೊಂಡು ಸಾರ್ವಜನಿಕ ಉಪಯೋಗ ಅನುವು ಮಾಡಲಾಗಿತ್ತು.ಆದರೆ ಸರಿಯಾದ ನಿರ್ವಹಿಣಿ ಇಲ್ಲದೇ ಶೌಚಾಲಯ ಮುಂದೆ ಪಟ್ಟಣ ಪಂಚಾಯತಿಯ ನೀರಿನ ಟ್ಯಾಂಕರ್ ನಲ್ಲಿ ನೀರು ಇಲ್ಲದೆ ಸಾರ್ವಜನಿಕರಿಗೆ ತೊಂದರೆಗೆ ಒಳಗಾಗಿದ್ದಾರೆ.ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬಯಲು ಶೌಚಾಲಯವನ್ನು ಮುಕ್ತ ಶೌಚಾಲಯ ಮಾಡಬೇಕು ಎಂದು ಹಂಬಲ ದಿಂದ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.ಆದರೆ ತಾಲ್ಲೂಕು ಕಚೇರಿ ಪಕ್ಕದಲ್ಲಿ ಅಧಿಕಾರಿಗಳಿಂದ ನಿರ್ಲಕ್ಷದಿಂದಾಗಿ ಬಯಲು ಶೌಚಾಲಯಗೆ ಅಧಿಕಾರಿಗಳು ಸಾರ್ವಜನಿಕ ರಿಂಗೆ ಅನುವು ಮಾಡಿಕೊಟ್ಟಂತಾಗಿದೆ. ಸಾರ್ವಜನಿಕರು ಶೌಚಾಲಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಶೌಚಾಲಯ ದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಮತ್ತು ನಿರ್ವಹಣೆ ಇಲ್ಲ ನೀರಿನ ವ್ಯವಸ್ಥೆ ಕೊಂಡ ಇಲ್ಲ ಸಂಬಂಧಪಟ್ಟ ಅಧಿಕಾರಿಗಳು ಇಂತ ಕಡೆ ಗಮನ ಹರಿಸಬೇಕು ಎಂದು ಸಾರ್ವಜನಿಕ ದೂರಿದರು.

ವರದಿ-ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು

Click to comment

Trending

Exit mobile version