ಕಲಬುರಗಿ

ನಿಂಬರ್ಗಾದಲ್ಲಿ ಅಮರ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ.

Published

on

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದಲ್ಲಿ ಭಾರತದ ಮೊಟ್ಟ ಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ‘ಆದಿಕವಿ’ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅಂಭಿಗರ ಚೌಡಯ್ಯ ಯುವ ಸಂಘದ ನೇತೃತ್ವದಲ್ಲಿ ಸರಳವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ನಿಂಬರ್ಗಾ ಯುವ ಮುಖಂಡ ಬಸವರಾಜ ಯಳಸಂಗಿ ಮಹರ್ಷಿ ವಾಲ್ಮೀಕಿಯು ರಾಮಾಯಣದಲ್ಲಿ ಭರತಖಂಡದಲ್ಲಿನ ಅರಣ್ಯಗಳು, ಪರ್ವತಗಳು, ನದಿ, ಸರೋವರ, ಸಮುದ್ರ, ಜಲಪಾತ ಹಾಗೂ ಪ್ರಕೃತಿಯ ಸೌಂದರ್ಯವನ್ನು ವರ್ಣಿಸಿದ್ದಾರೆ. ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳನ್ನು,ಆದರ್ಶ ವ್ಯಕ್ತಿಯ ಗುಣ ಲಕ್ಷಣಗಳನ್ನು ತಿಳಿಸಿದ್ದಾರೆ. ಮಮತೆ, ಸಮಾನತೆ, ಭ್ರಾತುತ್ವ, ತ್ಯಾಗ, ದೇಶಪ್ರೇಮ, ಅಳಿಲುಸೇವೆ, ಪಿತೃವಾಕ್ಯ ಪರಿಪಾಲನೆ, ಮಾನವೀಯ, ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ.ಅಂದಿನ ಹಾಗೂ ಇಂದಿನ ಸಮಸ್ತ ಕವಿಗಳಿಗೂ ಅವರು ಪ್ರೇರಣೆಯಾಗಿದ್ದಾರೆ. ರಾಮಾಯಣ ಮಹಾಕಾವ್ಯ ಸುಮಾರು28,000 ಶ್ಲೋಕಗಳನ್ನು ಒಳಗೊಂಡಿದೆ. ಇಂದಿನ ಯುವಕರಿಗೆ ಇಂತಹ ಮಹಾನ್ ವ್ಯಕ್ತಿಗಳ ಇತಿಹಾಸ ತಿಳಿಸುವುದು ಅಗತ್ಯವಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಲ್ಲಿನಾಥ ನಾಟಿಕಾರ,ದಿಗಂಬರ ಟಪ್ಪಾ, ಧಶರಥ ಬಳ್ಳಾ, ಗುಂಡಪ್ಪ ಕೌಂಟಗಿ, ರವಿ ನಾಟಿಕಾರ, ರಾಜು ಹಾವನೂರ, ಯಲ್ಲಪ್ಪ ಗೋಣಿ,ಕಲ್ಯಾಣಿ ಟಪ್ಪಾ,ಭೀಮಶಾ ಹಾದಿಮನಿ, ಲಕ್ಷ್ಮೀಕಾಂತ ಕಲ್ಲಡ,ಬಸಣ್ಣಾ ಟಪ್ಪಾ,ಬಾಬು ಭಾಸಗಿ,ರಾಘವೇಂದ್ರ ಸುಣಗಾರ ಹಾಗೂ ಪ್ರವೀಣ್ ಮಿಟೆಕಾರ ಉಪಸ್ಥಿತರಿದ್ದರು.

ವರದಿ- ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ

Click to comment

Trending

Exit mobile version