ಚಿಕ್ಕಬಳ್ಳಾಪುರ

ಹಸಿರು ಪಟಾಕಿ ಜೊತೆ ಕೆಂಪು ಪಟಾಕಿ ಸೇಲ್-ಸರ್ಕಾರದ ನಿಯಮ ಗಾಳಿಗೆ ತೂರಿದ ಮಾಲೀಕರು..!

Published

on

ಚಿಕ್ಕಬಳ್ಳಾಪುರ: ದೀಪಾವಳಿ ಹಬ್ಬ ಅಂದ್ರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಎಲ್ಲಿಲ್ಲಾದ ಸಂಭ್ರಮ ಸಡಗರ ,ಯಾಕಂದ್ರೆ ಈ ಹಬ್ಬದಲ್ಲಿ ದೀಪಗಳದ್ದೆ ಕಾರುಬಾರು ಜೊತೆಗೆ ಪಟಾಕಿ ಹಚ್ಚಿ ಹಬ್ಬವನ್ನು ಸಂಭ್ರಮ ಸಡಗರದಿಂದ ಎಲ್ಲರೂ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಆದ್ರೆ ಸರ್ಕಾರ ದೇಶದೆಲ್ಲೆಡೆ ಕೊರೊನಾ ಸೋಂಕು ಹೆಚ್ಚಿರುವ ಕಾರಣ ಜನರ ಹಿತದೃಷ್ಠಿಯಿಂದ ಪಟಾಕಿಯನ್ನು ನಿಷೇಧ ಮಾಡಿದ್ದು, ಕಡಿಮೆ ರಾಸಾಯನಿಕ ಬಳಸಿರುವ ಹಸಿರು ಪಟಾಕಿಗೆ ಮಾತ್ರ ಅವಕಾಶವನ್ನು ನೀಡಿತ್ತು, ಕೆಲವೊಂದು ಕಡೆ ಸರ್ಕಾರದ ನಿಯಮವನ್ನು ಜನರು ಸರಿಯಾದ ನಿಟ್ಟಿನಲ್ಲಿ ಪಾಲಿಸುತ್ತಿದ್ದರೆ ,ಇನ್ನುಳಿದ ಕಡೆ ಮಾತ್ರ ಸರ್ಕಾರದ ನಿಯಮವನ್ನು ಗಾಳಿಗೆ ತೂರಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪಟಾಕಿ ಅಂಗಡಿಗಳು ಸುಮಾರು ಒಂದು ಲಕ್ಷಕ್ಕೂ ಅಧಿಕ ಬೆಲೆಬಾಳುವ ಹಸಿರು ಪಟಾಕಿ ಹೊರತು ಪಡಿಸಿ ಇನ್ನುಳಿದ ಪಟಾಕಿಗಳನ್ನು ಚಿಕ್ಕಬಳ್ಳಾಪುರ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ದಾಳಿ ನಡೆಸಿ ಸೀಜ್ ಮಾಡಲಾಗಿದೆ. ಸರ್ಕಾರ ಹಸಿರು ಪಟಾಕಿಗಳನ್ನು ಮಾರುವುದಕ್ಕಷ್ಟೇ ಅನುಮತಿ ಕೊಟ್ಟಿದ್ದರು ಹಸಿರು ಪಟಾಕಿ ಜೊತೆ ಕೆಂಪು ಪಟಾಕಿಗಳನ್ನು ಕೆಲ ಅಂಗಡಿ ಮಾಲೀಕರ ಜನರಿಗೆ ಸೇಲ್ ಮಾಡುತ್ತಿದ್ದು ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಸ್ಥಳೀಯ ತಹಶೀಲ್ದಾರ್ ನಾಗಪ್ರಶಾಂತ್ ಹಾಗೂ ಡಿವೈಎಸ್ಪಿ ದಾಳಿ ನಡೆಸಿ ಪಟಾಕಿಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ವಾರ್ನಿಂಗ್ ಕೊಟ್ಟು ಹಸಿರು ಪಟಾಕಿಗಳನ್ನು ಮಾತ್ರ ಉಪಯೋಗಿಸಬೇಕೆಂದು ಸೂಚನೆ ನೀಡಲಾಗಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ.

Click to comment

Trending

Exit mobile version