ಲೈಫ್ ಸ್ಟೈಲ್

ಹಬ್ಬ-ಹರಿದಿನಗಳಿಗೆ ರುಚಿಯಾದ ರಾಗಿ ಚಕ್ಕುಲಿ..!

Published

on

ಮನೆಗಳಲ್ಲಿ ಹಬ್ಬ ಹರಿದಿನ ಬಂತೆಂದ್ರೆ ಸಾಕು ರುಚಿರುಚಿಯಾದ ತಿಂಡಿ ತಿನಿಸು ತಿನ್ನಲು ಎಲ್ರೂ ರೆಡಿಯಾಗಿರ್ತಾರೆ. ಕಾರಣಂತರಗಳಿಂದ ಮನೆಯಲ್ಲಿ ಕೆಲತಿಂಡಿ ತಿನಸುಗಳನ್ನು ಮಾಡಲು ಕಷ್ಟ ಎಂದು ಕೆಲವರು ಅಂಗಡಿಯಿಂದ ಕೆಲವೊಂದಿಷ್ಟು ತಿಂಡಿಗಳನ್ನು ತಂದು ಹಬ್ಬ ಹರಿದಿನಗಳಲ್ಲಿ ಉಪಯೋಗಿಸುತ್ತಾರೆ. ಅಂಗಡಿಯಲ್ಲಿ ತಯಾರಿಸಿದ ಚಕ್ಕುಲಿಯಲ್ಲಿ ಎಣ್ಣೆ ಅಂಶ ಹೆಚ್ಚಿರುತ್ತದೆ ಆಗಾಗಿ ಅದು ಕೆಲವರಿಗೆ ಇಷ್ಟ ಆಗದೇ ಇರಲು ಬಹುದು ಆಗಾಗಿ ಮನೆಯಲ್ಲಿಯೇ ರುಚಿಯಾದ ಚಕ್ಕುಲಿ ಹೇಗೆ ತಯಾರಿಸಬಹುದು ಎಂಬುವುದನ್ನು ತೊರಿಸುತ್ತೇವೆ…
ಬೇಕಾಗುವ ಸಾಮಾಗ್ರಿಗಳು;
ರಾಗಿಹಿಟ್ಟು-ಒಂದು ಕಪ್
ಕಡ್ಲೇಹಿಟ್ಟು
ಹುರಿಗಡಲೆ-ಸ್ವಲ್ಪ
ಜೀರಿಗೆ-1ಚಮಚ
ಮೆಣಸಿನಪುಡಿ
ಇಂಗು
ಎಣ್ಣೆ
ಉಪ್ಪು
ಮಾಡುವ ವಿಧಾನ:
ಮೊದಲಿಗೆ ಮಿಕ್ಸಿ ಜಾರ್ ನಲ್ಲಿ ಹುರಿಗಡಲೆ ಹಾಕು ಪುಡಿಮಾಡಿಕೊಳ್ಳಬೇಕು ನಂತರ ಒಂದು ಪಾತ್ರೆಯಲ್ಲಿ ರಾಗಿಹಿಟ್ಟು, ಕಡಲೆಹಿಟ್ಟು, ಸ್ವಲ್ಪ ಬೆಣ್ಣೆ, ಇಂಗು, ಮೆಣಸಿನಪುಡಿ ಮತ್ತು ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸಾಕಷ್ಟು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಳಸಿಕೊಳ್ಳಬೇಕು. ನಂತರ ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯಿಸಿಕೊಳ್ಳಬೇಕು ನಂತರ ಚಕ್ಕುಲಿ ಒರಳಿನಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟಿನ ಉಂಟೆಗಳನ್ನು ಇಟ್ಟು ಚಕ್ಕುಲಿಯಾ ಆಕಾರದಲ್ಲಿ ಒತ್ತಿ ಬೇಯಿಸಬೇಕು ನಂತರ ಅದನ್ನು ಒಂದು ಪ್ಲೇಟ್ ನಲ್ಲಿ ಹಾಕಿ ರುಚಿಯಾದ ಚಕ್ಕುಲಿಯನ್ನು ಸವಿಯಲು ನೀಡಬಹುದು.

Click to comment

Trending

Exit mobile version