ತಿಪಟೂರು

ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ಉತ್ತರಾಧಿಕಾರಿ ನಿಯೋಜನೆ…!

Published

on

ತಿಪಟೂರು: ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಸೋಮೇಕಟ್ಟೆ ಶ್ರೀ ಕಾಡಸಿದ್ದೇಶ್ವರ ಮಠದ 21ನೇ ಗುರುವಾಗಿ ಶ್ರೀ ಶಿವಯೋಗಿ ಸ್ವಾಮೀಜಿ ಯವರಿಗೆ ಉತ್ತರಾಧಿಕಾರಿಯಾಗಿ ಪಟ್ಟಾದೀಕ್ಷೆಯನ್ನು ಹಿರಿಯ ಶ್ರೀಗಳಾದ ಕರಿವೃಷಭ ಶಿವಯೋಗೀಶ್ವರ ದೇಶೀಕೇಂದ್ರ ಸ್ವಾಮೀಜಿ ನೀಡಿದರು. ಬಳಿಕ ಆಶೀರ್ವಚನ ನೀಡಿದ ಹಿರಿಯ ಶ್ರೀಗಳು ಲಿಂಗೈಕ್ಯ ವೀರಗಂಗಾಧರ ಶಿವಾಚಾರ್ಯರ ವರಪುತ್ರನಾಗಿ ಅವರ ಆಶೀರ್ವಾದದಿಂದ ಬೆಳೆದಿದ್ದು ಈ ಮಠಕ್ಕೆ ವಟುವಾಗಿ ಕಳಿಸಿದರು. ಮಠಕ್ಕೆ ಬಂದಂತಹ ಪರಿಸ್ಥಿತಿಯಲ್ಲಿ ರಸ್ತೆ ಕೂಡ ಇರಲಿಲ್ಲ ಸಂಪೂರ್ಣ ಕಾಡಾಗಿದ್ದ ಮಠದಲ್ಲಿ ಮೂವತ್ತೆಂಟು ವರ್ಷಗಳು ಕಳೆದಿದ್ದೇನೆ. ಇಂದು ರಾಜ್ಯ ಹೊರರಾಜ್ಯದ ಭಕ್ತರು ಇಲ್ಲಿಗೆ ಬರುವಂತಾಗಿ ಮಠ ಬೆಳೆದಿದೆ. ಇದಕ್ಕೆ ನೊಣವಿನಕೆರೆಯ ಭಕ್ತರಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿಗಳು ಬರುವಂತಾಗಿದೆ ಎಂದರು. ಕಿರಿಯ ಶ್ರೀಗಳಾದ ಶಿವಯೋಗಿ ಸ್ವಾಮೀಜಿ ಮಾತನಾಡಿ ಹಿರಿಯ ಶ್ರೀಗಳು ಮಠದ ಅಭಿವೃದ್ಧಿ ಜತೆಗೆ ಜನಸಾಮಾನ್ಯರ ಅಭಿವೃದ್ಧಿಗೆ ಶ್ರಮಿಸಿ ನಿತ್ಯ ದಾಸೋಹ ಶಿಕ್ಷಣ ನೀಡುತ್ತಾ ತ್ರಿವಿಧ ದಾಸೋಹ ಮಠವಾಗಿದೆ ಹಿರಿಯರ ದಾರಿಯಲ್ಲಿ ನಾವು ಕೂಡ ನಡೆಯಲಿದ್ದು ಸಮಸ್ತ ಭಕ್ತಾದಿಗಳು ಸಹಕರಿಸುವಂತೆ ಮನವಿ ಮಾಡಿದರು.

ವರದಿ- ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version