ಮಂಡ್ಯ

ಕಾನೂನು ಸೇವೆಗಳ ಸಮಿತಿ ವಕೀಲರ ಸಂಘದ ನೇತೃತ್ವದಲ್ಲಿ ಏಡ್ಸ್ ದಿನಾಚರಣೆ..!

Published

on

ಮಳವಳ್ಳಿ: ಎಚ್.ಐ.ವಿ ಊಟ, ತಿಂಡಿ, ಬಟ್ಟೆ, ತಂಪುಪಾನೀಯ, ಹಂಚಿಕೊಳ್ಳವುದರಿಂದ ಬರುವುದಿಲ್ಲ ಸೊಳ್ಳೆಗಳು. ಕ್ರಿಮಿ.ಕೀಟಗಳು ಕಚ್ಚುವುದರಿಂದ ಹರಡುವುದಿಲ್ಲ. ಕೆಮ್ಮು, ಸೀನು, ಗಾಳಿ ಸೇವನೆಯಿಂದ ಹರಡುವುದಿಲ್ಲ ಒಂದೇ ಸ್ನಾನದಮನೆ, ಅಡುಗೆಮನೆ, ಶೌಚಾಲಯ ಬಳಸುವುದರಿಂದ ಹರಡುವುದಿಲ್ಲ ಇದರ ಅರಿವು ಎಲ್ಲರಿಗೂ ಇರಬೇಕಾದದು ಅವಶ್ಯಕವಾಗಿದೆ ಎಂದು ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಂ ರಾಧಾಕೃಷ್ಣ ತಿಳಿಸಿದರು. ಮಳವಳ್ಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಕಾನೂನು ಸೇವೆಗಳು ಸಮಿತಿ ವಕೀಲರು ಸಂಘದ ನೇತೃತ್ವದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆಯನ್ನು ಉದ್ಘಾಟಸಿ ನಂತರ ಮಾತನಾಡಿ ಎಚ್.ಐ.ವಿ ಸೋಂಕು ಮಾನವನಿಗೆ ಅಸುರಕ್ಷಿತ ಲೈಂಗಿಕತೆ ಯಿಂದ ರಕ್ತವನ್ನುಪರೀಕ್ಷೆ ಮಾಡುವ ಸಂದರ್ಭದಲ್ಲಿ ಸೋಂಕಿತ ತಾಯಿ ಗರ್ಭಾವಸ್ಥೆಯಲ್ಲಿ ಅಥವಾ ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಹಾಗೂ ಸಂಸ್ಕರಣೆ ಮಾಡದ ಸೂಜಿ ಸಿರಂಜ್ ಗಳನ್ನು ಬಳಸುವುದು ಸೇರಿದಂತೆ ನಾಲ್ಕು ವಿಧಾನಗಳಲ್ಲಿ ಹರಡುತ್ತದೆ ಎಂದರು. ಎಚ್.ಐ.ವಿ ಮಾನವನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಒಂದು ವೈರಣು ಇದು ಹಂತಹಂತವಾಗಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಾ ಹೋಗಿ ಅಂತಿಮವಾಗಿ ಮಾನವನನ್ನು ಬಲಿ ಪಡೆಯುತ್ತದೆ ಎಂದರು. ಕಾರ್ಯಕ್ರಮದಲ್ಲಿ 1 ನೇ ಹೆಚ್ಚುವರಿ ಸಿವಿಲ್ ನ್ಯಾಯಾದೀಶೆ ಐಶ್ವರ್ಯ ಚಿದಾನಂದಪಟ್ಟಣ ಶೆಟ್ಟಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ವೀರಭದ್ರಪ್ಪ, ಆರೋಗ್ಯ ಶಿಕ್ಷಣಾಧಿಕಾರಿ ವೀರಣ್ಣಗೌಡ ತಾಲ್ಲೂಕು ವಕೀಲರ ಸಂಘದ ಅಧ್ಯಕ ಎನ್ ಎಂ ಮಲ್ಲೇಶ್ ಸರ್ಕಾರಿ ಅಭಿಯೋಜಕ ಮಧು ಸೂಧನ್, ಪೂರ್ಣಿಮಾ, ಸಾರ್ವಜನಿಕ ಆಸ್ವತ್ರೆ ಆಡಳಿತಾಧಿಕಾರಿ ಡಾ. ಮಹದೇವನಾಯಕ್, ವಕೀಲ ಮಹೇಶ್ ಎಂ, ಮಲ್ಲಪ್ಪ, ಸೇರಿವಂತೆ ಮತ್ತಿತ್ತರರು ಇದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version