ಮಂಡ್ಯ

ಕಾಡಾನೆಗಳ ಹಾವಳಿಯಿಂದ ಬೇಸತ್ತಾ ಗ್ರಾಮಸ್ಥರು..!

Published

on

ಮಳವಳ್ಳಿ: ಕಾಡಾನೆಗಳ ನಿರಂತರ ದಾಳಿಯಿಂದಾಗಿ ವರ್ಷದಿಂದ ಕಷ್ಟ ಪಟ್ಟು ಬೆಳೆದ ಫಸಲು ನಾಶವಾಗುತ್ತಿದೆ. ರೈತರು ಬದುಕು ನಡೆಸುವುದು ಬಹಳ ಕಷ್ಟವಾಗುತ್ತಿದೆ. ನಾಡಿಗೆ ಬಂದಿರುವ ಆನೆಗಳನ್ನು ಕಾಡಿಗೆ ಅಟ್ಟ ಬೇಕೆಂದು ಆಗ್ರಹಿಸಿ ಗುಂಡಾಪುರ ಗ್ರಾಮದ ರೈತರು ಹಲಗೂರು ವಲಯ ಅರಣ್ಯ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಿದರು. ಬಸವನ ಬೆಟ್ಟ ಅರಣ್ಯ ವಲಯದಿಂದ ಬಂದ ಆನೆಗಳು ರಾಗಿ ಮತ್ತು ಭತ್ತ ಬೆಳೆ ಸೇರಿದಂತೆ ಕಟಾವು ಮಾಡಿರುವ ಮೆದೆಗಳನ್ನು ಸಹ ಹಾನಿ ಮಾಡುತ್ತಿವೆ. ಮಾವಿನ ಮರಗಳು, ಬಾಳೆಗಿಡಗಳು ಮತ್ತು ನೀರಿನ ಪೈಪುಗಳನ್ನು ಮುರಿದು ಹಾಕಿವೆ. ಆನೆಗಳ ಮೂರು ತಂಡಗಳು ಹದಿನೈದು ದಿನಗಳಿಂದ ನಿರಂತರವಾಗಿ ಗ್ರಾಮದ ಹಲವಾರು ರೈತರ ಫಸಲನ್ನು ಹಾನಿ ಮಾಡುತ್ತಿವೆ. ರಾತ್ರಿ ವೇಳೆಯಲ್ಲಿ ಆನೆಗಳು ಗ್ರಾಮದ ಕಡೆಗೆ ಬಂದು ಫಸಲು ಹಾನಿ ಮಾಡುತ್ತಿದೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಲು ಹೋದ್ರೆ ಯಾವುದೇ ರೀತಿ ಸ್ಪಂಧಿಸುತ್ತಿಲ್ಲ ಫೋನ್ ಮಾಡಿದರೇ ಮೋಬೈಲ್ ಸ್ವೀಚ್ ಆಫ್ ಮಾಡಿಕೊಳ್ಳುತ್ತಾರೆ ಅಧಿಕಾರಿಗಳು ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳೂ ಕ್ರಮಕೈಗೊಳ್ಳಬೇಕೆಂಧು ಆಗ್ರಹಿಸಿದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version