Uncategorized

ರಾತ್ರೋರಾತ್ರಿ ಕಳ್ಳರ ಕೈಚಳಕ- ಸಿಂಧಗಿಯಲ್ಲಿ ಅಂಗಡಿಗಳಲ್ಲಿ ಸರಣಿ ಕಳ್ಳತನ..!

Published

on

ಸಿಂಧಗಿಯಲ್ಲಿ ರಾತ್ರೋರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಒಂದೇ ರಾತ್ರಿ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆಸಿದ್ದಾರೆ. ಇನ್ನು ಕಳ್ಳರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಳಿಗೆಗಳಲ್ಲಿ ನಗದು ಸೇರಿ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಸಿಂಧಗಿ ಪಟ್ಟಣದ ಸಂಗೀತಾ ಮೊಬೈಲ್ ಶೋರೂಂನಲ್ಲಿ ಲಕ್ಷಾಂತರ ರೂ. ಮೌಲ್ಯದ ಮೊಬೈಲ್ಗನಳನ್ನು ಖದೀಮರು ದೋಚಿದ್ದಾರೆ. ಅಲ್ಲದೆ ಸಿದ್ದೇಶ್ವರ ಸೂಪರ್ ಬಾಜಾರ್, ಪೂಜಾರಿ ಟೈರ್ ರಿಮೊಡಿಂಗ್ ಶಾಫ್ ಹಾಗೂ ಸ್ಪೂರ್ತಿ ವೈನ್ ಶಾಫ್ ಗಳಲ್ಲಿಯೂ ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞ ಮತ್ತು ಡಾಗ್ ಸ್ಕ್ವಾಡ್ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧಸಿಂದಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ-ಅಂಬರೀಶ್ ಎಕ್ಸ್ ಪ್ರೆಸ್ ಟಿವಿ ಸಿಂಧಗಿ

Click to comment

Trending

Exit mobile version