ರಾಯಚೂರು

ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ವಿಳಂಭ- ಜಿಲ್ಲಾಡಳೀತ ವಿರುದ್ಧ ಪ್ರತಿಭಟನೆ..!

Published

on

ರಾಯಚೂರು: ಜುರಾಲಾ ಡ್ಯಾಮ್ ಹಿನ್ನೀರಿನಿಂದ ಮುಳುಗಡೆಗೊಂಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ಕಳೆದ 9 ವರ್ಷಗಳಿಂದ ನೆನಗುದಿಗೆ ಬಿದ್ದಿರುವುದಕ್ಕೆ ಲೋಕೋಪಯೋಗಿ ಮತ್ತು ಜಿಲ್ಲಾಡಳಿತ ಕಾರಣವಾಗಿದ್ದು ಇದರ ವಿರುದ್ಧ ನಾರದಗಡ್ಡೆಯಿಂದ ಜಿಲ್ಲಾಡಳಿತ ಕಛೇರಿಗೆ ಬೃಹತ್ ಪಾದಯಾತ್ರೆ ಮಾಡಿ ವಿಳಂಬಕ್ಕೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಲಾಗುವುದೆಂದು ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಡಿ.ವಿರೇಶ ಕುಮಾರ ತಿಳಿಸಿದರು. ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿ, ಈ ಸೇತುವೆ ಕಾಮಗಾರಿಗೆ 1991ರಲ್ಲಿ ಜಿಲ್ಲಾಧಿಕಾರಿಗಳ ಖಾತೆಗೆ ಅಂದಾಜು 91ಕೋಟಿ ರೂಗಳ ಅನುದಾನ ಬಂದಿದೆ. ನಂತರ 2 ವರ್ಷಗಳ ಕಾಲ ಕಾಮಗಾರಿ ನಡೆಸಿ ಪಿಲ್ಲರ್ ಗಳನ್ನು ಮಾಡಿದ್ದು ಬಿಟ್ಟರೆ ಮತ್ತೇನು ಮಾಡಿಲ್ಲ. ಹಣವಿದ್ದು, ಭೂ ಸ್ವಾಧೀನದ ತೊಂದರೆ ಇಲ್ಲ ಆದಾಗ್ಯೂ ಕಾಮಗಾರಿ ನಿರ್ವಹಣೆ ಮಾಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ಕುರುವಕಲ, ಕುರುವಕುರ್ದಾ, ಮಂಗಿಗಡ್ಡ, ರಾಮಗಡ್ಡ, ನಾರದಗಡ್ಡ ಈ ಐದು ಹಳ್ಳಿಗಳಿಗೆ ಸಂಪರ್ಕವಿಲ್ಲದಂತಾಗಿದೆ.2001 ರಿಂದ 2003ರವೆಗಿನ ಭೂಸ್ವಾಧೀನದಲ್ಲಿ ರೈತರ ಮತ್ತು ಸರ್ಕಾರದ ನಡುವೆ ಯಾವುದೇ ವ್ಯಜ್ಯವಿಲ್ಲ. ನಂತರ ಲೋಕೋಪಯೋಗಿ ಇಲಾಖೆಯಿಂದ ಈ ಕಾಮಗಾರಿಗಳಿಗೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆದಾರರಿಗೆ ಮೂಲಭೂತ ಸೌಕರ್ಯ ನೀಡದೇ ಕಾಮಗಾರಿ ನಿರ್ವಹಣೆ ಮಾಡಲಾಗುತ್ತಿಲ್ಲ. ಲೋಕೋಪಯೋಗಿ ಇಲಾಖೆಯ ಬೇಜಬ್ದಾರಿತನದಿಂದ ಅರ್ಧಕ್ಕೆ ಸೇತುವೆ ನಿಂತಿದೆ ಎಂದು ಹೇಳಿದರು. ಕೇವಲ ತಾಂತ್ರಿಕ ಕಾರಣಗಳನ್ನು ಹೇಳುತ್ತಲೇ ಅಧಿಕಾರಿಗಳ ಕಾಲಹರಣ ಮಾಡಿದ್ದಾರೆ ಎಂದು ಆರೋಪಿಸಿದರು.

ವರದಿ-ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು

Click to comment

Trending

Exit mobile version