ಸಿನಿಮಾ

ತನ್ನ ಆಸ್ತಿಯನ್ನು 10 ಕೋಟಿಗೆ ಅಡವಿಟ್ಟ ಬಾಲಿವುಡ್ ನಟ ಸೋನುಸೂದ್ ..!

Published

on

ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಬಾಲಿವುಡ್ ನಟ ಸೋನುಸೂದ್ ತಮ್ಮಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ಜನರ ನಡುವೆ ರಿಯಲ್ ಹೀರೋ ಅಂತ ಕರೆಸಿಕೊಂಡಿದ್ದಾರೆ. ಆದ್ರೀಗ ಮತ್ತೇ ಸೊನುಸೂದ್ ಕಷ್ಟದಲ್ಲಿರುವವರ ಸಹಾಯಕ್ಕಾಗಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಲಾಕ್‌ ಡೌನ್ ಟೈಮ್‌ನಿಂದ ಸಾಕಷ್ಟು ಸಹಾಯ ಮಾಡಿ ಗುರುತಿಸಿಕೊಂಡಿರುವ ನಟ ಸೋನು ಸೂದ್ ಮುಂಬೈನಲ್ಲಿರುವ ತಮ್ಮ ಎಂಟು ಆಸ್ತಿಗಳನ್ನು ಅಡವಿಟ್ಟಿದ್ದಾರೆ. ಅವರಿಗೆ ಹತ್ತು ಕೋಟಿ ರೂಪಾಯಿ ಅವಶ್ಯಕತೆ ಇದ್ದರಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಾಲ ತುಂಬಲು ಹತ್ತು ಕೋಟಿ ರೂಪಾಯಿ ಅವಶ್ಯಕತೆಯಿದ್ದರಿಂದ ಸೋನು ಸೂದ್ ಜುಹುವಿನಲ್ಲಿರುವ ತಮ್ಮ ಎಂಟು ಆಸ್ತಿ ಮೂಲಗಳನ್ನು ಅಡವಿಟ್ಟಿದ್ದಾರೆ. ಇದರಲ್ಲಿ ಎರಡು ಅಂಗಡಿಗಳು, ಆರು ಫ್ಲಾಟ್ ಇದೆ ಎನ್ನಲಾಗಿದೆ. ಕಳೆದ ಸೆಪ್ಟೆಂಬರ್ 15 ರಂದು ಒಪ್ಪಂದಕ್ಕೆ ಸಹಿ ಹಾಕಿದ್ದು, ನವೆಂಬರ್ 24 ಕ್ಕೆ ರಿಜಿಸ್ಟರ್ ಆಗಿದೆ ಎನ್ನಲಾಗಿದೆ. ಇನ್ನೂ ಮುಂಬೈನ ಎಬಿ ನಾಯರ್ ರಸ್ತೆಯಲ್ಲಿ ಕಟ್ಟಡವಿದೆ. ಇದರ ಜೊತೆಗೆ ಸಾಲ ಸಂಗ್ರಹಿಸಲು ಐದು ಲಕ್ಷ ರೂಗಳ ನೋಂದಣಿ ಶುಲ್ಕವನ್ನು ಪಾವತಿ ಮಾಡಲಾಗಿತ್ತು. ಈ ಆಸ್ತಿಗಳು ಸೋನು ಸೂದ್ ಹಾಗೂ ಅವರ ಪತ್ನಿಯ ಹೆಸರಿನಲ್ಲಿಯೇ ಇರುತ್ತದೆ. ತಿಂಗಳು ಬಾಡಿಗೆಯನ್ನು ಕೂಡ ಪಡೆಯಬಹುದು. ಆದರೆ 10 ಕೋಟಿ ರೂಪಾಯಿ ಸಾಲಕ್ಕೆ ಬಡ್ಡಿ ನೀಡಬೇಕಾಗುತ್ತದೆ ಎಂದು ವರದಿ ತಿಳಿಸಿವೆ. ಲಾಕ್‌ಡೌನ್ ಸಮಯದಲ್ಲಿ ಅನೇಕ ವಲಸೆ ಕಾರ್ಮಿಕರಿಗೆ ಅವರ ಊರಿಗೆ ತೆರಳಲು ಸೋನು ಬಸ್, ರೈಲು ವ್ಯವಸ್ಥೆ ಮಾಡಿದ್ದರು. ರೈತರೊಬ್ಬರಿಗೆ ಹೊಲದಲ್ಲಿ ಊಳಲು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಿದ್ದರು. ಇನ್ನೂ ಅನೇಕ ಹೆಣ್ಣು ಮಕ್ಕಳಿಗೆ ಓದಲು ಅನುಕೂಲ ಮಾಡಿಕೊಟ್ಟಿದ್ದರು. ಕೆಲವರ ಸರ್ಜರಿ ಮಾಡಿಸಲು ಕೂಡ ಹಣ ಸಹಾಯ ಮಾಡಿದ್ದರು. ಇದರ ಜೊತೆಗೆ ಸೋನು ಸೂದ್, ಹಲವು ಕ್ಷೇತ್ರಗಳಲ್ಲಿನ ಕೆಲಸದ ಬಗ್ಗೆ ಮಾಹಿತಿ ನೀಡುವಂತ ‘Pravasi Rojgar’ ಆಪ್‌ವೊಂದನ್ನು ಲಾಂಚ್ ಮಾಡಿದ್ದರು. ಇದರಿಂದ ಎಲ್ಲಿ ಯಾವ ಕೆಲಸ ಖಾಲಿಯಿದೆ ಎಂಬುದು ತಿಳಿಯಲಿದ್ದು, ಸೋನು ಅವರ ಹೆಸರಿನಲ್ಲಿ ನಕಲಿ ಖಾತೆಗಳು ಕೂಡ ಸೃಷ್ಟಿಯಾಗಿತ್ತು, ಇದರ ಬಗ್ಗೆ ಅವರು ಮಾಹಿತಿ ನೀಡಿ ಮೋಸಕ್ಕೆ ಒಳಗಾಗಬೇಡಿ ಎಂದು ಹೇಳಿದ್ದರು. ಒಟ್ಟಿನಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ನೂರಾರು ಜನರಿಗೆ ನೆರವಾಗಿದ್ದ ಸೋನು ಸೂದ್ ಈಗ ಒಂದು ಹೆಜ್ಜೆ ಮುಂದೆ ಹೋಗಿ ಜೀವನದಲ್ಲಿ ಬಹುದೊಡ್ಡ ರಿಸ್ಕ್ ತೆಗೆದುಕೊಂಡು ಬಡವರ ಕಷ್ಟಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version