ಸಿನಿಮಾ

ಏಷ್ಯಾದ ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಸೊನುಸೂದ್ ಗೆ ಮೊದಲ ಸ್ಥಾನ..!

Published

on

ದೇಶದೆಲ್ಲೇಡೆ ಕೊರೊನಾ ಸೋಂಕಿಗೆ ಜನರು ತತ್ತರಿಸಿ ಹೊಗಿದ್ದರು. ಕೈಯಲ್ಲಿಇದ್ದಂತಹ ಕೆಲಸವನ್ನು ಕಳೆದುಕೊಂಡು ಅದೆಷ್ಟೋ ಜನ್ರು ಬೀದಿಗೆ ಬಿದ್ದಿದ್ದರು.ಜನರು ಹಳ್ಳಿಯಿಂದ ಕೆಲಸಕ್ಕಾಗಿ ಸಿಟಿಯನ್ನು ಅರಸಿ ಬಂದಂತಹ ಜನರಿಗೆ ತಮ್ಮ ತಮ್ಮ ಊರುಗಳಿಗೆ ವಾಪಸ್ಸು ಹೋಗುವುದಕ್ಕೂ ಕೈಯಲ್ಲಿ ದುಡ್ಡು ಇಲ್ಲದೇ ಬಸ್ಸ್ ಗಳು ಇಲ್ಲದೇ ಪರದಾಡುತ್ತಿದ್ದರು. ಈ ಸಮಯದಲ್ಲಿ ಸಂಕಷ್ಟದಲ್ಲಿದ್ದಂತಹ ಜನರಿಗೆ ಬೆನ್ನೆಲುಬಾಗಿ ನಿಂತಂತಹ ಬಾಲಿವುಡ್ ಸ್ಟಾರ್ ಸೋನುಸೂದ್.ಮಹಾಮಮಾರಿ ಸೊಂಕಿನಿಂದ ನಲುಗಿ ಹೊಗಿದ್ದ ಜನರ ಸಂಕಷ್ಟಕ್ಕೆ ನಟ ಸೋನುಸೂದ್ ಅವರ ಕಾರ್ಯಾವನ್ನೂ ಈ ಹಿಂದೆಚ ವಿಶ್ವ ಸಂಸ್ಥೆಯೂ ಶ್ಲಾಘಿಸಿತ್ತು.ಇದೀಗ ಏಷ್ಯಾದ ಟಾಪ್ 50 ಸೆಲೆಬ್ರೆಟಿಗಳ ಪಟ್ಟಿ ರಿಲೀಸ್ ಆಗಿದ್ದು, ಬಾಲಿವುಡ್ ನಟ ಸೋನು ಸೂದ್ ಮೊದಲ ಸ್ಥಾನ ಪಡೆದಿದ್ದಾರೆ. ಬ್ರಿಟನ್ ‘ಈಸ್ಟರ್ನ್ ಐ’ ನಿಯತಕಾಲಿಕೆ ಪ್ರಕಟಿಸಿರುವ ಏಷ್ಯಾದ ಟಾಪ್ 50 ಸೆಲೆಬ್ರೆಟಿಗಳ ಪಟ್ಟಿಯಲ್ಲಿ ಭಾರತದ ಇಬ್ಬರು ಸೆಲೆಬ್ರೆಟಿಗಳು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಸೋನುಸೂದ್ ಗೆ ಮೊದಲ ಸ್ಥಾನ ಸಿಕ್ಕಿದ್ದು, ಭಾರತೀಯ ಮೂಲದ ಲಿಲ್ಲಿ ಸಿಂಗ್ ಗೆ ಎರಡನೇ ಸ್ಥಾನ ಸಿಕ್ಕಿದೆ. ಸಿನಿಮಾ ಮಾತ್ರವಲ್ಲದೇ ನಟ ಸೋನು ಸೂದ್ ಲಾಕ್ ಡೌನ್ ಬಳಿಕ ಮಾನವೀಯ ಕಾರ್ಯಗಳಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದು, ಇದೀಗ ಏಷ್ಯಾದ ನಂಬರ್-1 ಸೆಲೆಬ್ರಿಟಿಯಾಗಿ ಮಿಂಚಿದ್ದಾರೆ.ಈ ಕುರಿತು ಈಸ್ಟರ್ನ್ ಐ ನ ಸಂಪಾದಕ ಅಜರ್ ನಜೀರ್ ,ಏಸ್ಯಾದ ನಂಬರ್-1 ಸೆಲೆಬ್ರೆಟಿ ಸ್ಥಾನಕ್ಕೆ ಸೊನುಸೂದ್ ಅರ್ಹ ವ್ಯಕ್ತಿ, ಕೊರೊನಾ ಸಮಯದಲ್ಲಿ ಅವರು ಜನರಿಗೆ ಸಹಾಯ ಮಾಡಿರುವಷ್ಟು ಯಾವ ಸೆಲೆಬ್ರೆಟಿ ಕೂಡ ಮಾಡಿಲ್ಲ ಸದಾ ಜನರ ಕಷ್ಟಕ್ಕೆ ಸೋನುಸೂದ್ ಸ್ಪಂದಿಸುತ್ತಿದ್ದಾರೆ ಎಂದಿದ್ದಾರೆ.

Click to comment

Trending

Exit mobile version