ಸಿನಿಮಾ

ಬಾಲಿವುಡ್ ನ ಖ್ಯಾತ ನಿರ್ಮಾಪಕ/ನಿರ್ದೇಶಕನಿಗೆ ಎನ್ ಸಿಬಿ ಶಾಕ್..!

Published

on

ಬಾಲಿವುಡ್ ಡ್ರಗ್ಸ್ ಮಾಫಿಯಾ ಕುರಿತು ಎನ್ ಸಿಬಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಹಲವು ಸೆಲೆಬ್ರೆಟಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಈಗ ಖ್ಯಾತ ನಿರ್ಮಾಪಕ/ನಿರ್ದೇಶಕರಾದ ಕರಣ್ ಜೋಹರ್ ಗೆ ಎನ್ ಸಿಬಿ ನೋಟಿಸ್ ನೀಡಿದ್ದು ಶಾಕ್ ಕೊಟ್ಟಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರಿಗೆ ಎನ್ ಸಿ ಬಿ ನೋಟಿಸ್ ಜಾರಿ ಮಾಡಿದೆ. 2019ರಲ್ಲಿ ಕರಣ್ ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ವಿಕ್ಕಿ ಕೌಶಾಲ್, ವರುಣ್ ಧವನ್, ಅರ್ಜುನ್ ಕಪೂರ್, ಶಾಹಿದ್ ಕಪೂರ್, ಮಲೈಕಾ ಅರೋರಾ ಸೇರಿದಂತೆ ಅನೇಕರು ಆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅದೇ ಪಾರ್ಟಿಯಲ್ಲಿ ಮಾದಕ ವಸ್ತು ಬಳಕೆ ಆಗಿದೆ ಎಂದು ಆರೋಪಿಸಿ ಶಿರೋಮಣಿ ಅಕಾಲಿ ದಳದ ಮುಖಂಡ ಮಂಜಿಂದರ್ ಸಿಂಗ್ ಶಿರ್ಸಾ ದೂರು ನೀಡಿದ್ದರು. ಆ ಸಂಬಂಧ ಈಗ ಕರಣ್ಗೆ ನೋಟಿಸ್ ನೀಡಲಾಗಿದೆ. ಡಿಸೆಂಬರ್ 16 ರಂದು ಎನ್ಸಿಬಿ ಈ ನೋಟಿಸ್ ಜಾರಿ ಮಾಡಿದ್ದು, ಈ ಬಗ್ಗೆ ಕರಣ್ ಅವರು ಸ್ವತಃ ಎನ್ಸಿಬಿ ಕಚೇರಿಗೆ ಹಾಜರಾಗುವ ಅವಶ್ಯಕತೆ ಇಲ್ಲ. ಆದರೆ ವೈರಲ್ ವಿಡೀಯೊ ಕುರಿತು ಅವರು ಶೀಘ್ರದಲ್ಲೇ ಪ್ರತಿಕ್ರಿಯೆ ನೀಡಬೇಕು ಎಂದು ಮೂಲಗಳು ತಿಳಿಸಿವೆ. ಅಂದಹಾಗೆ, ಈ ವಿಡಿಯೋ ಬಗ್ಗೆ ಕರಣ್ ಹಲವು ಬಾರಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹಾಗಿದ್ದರೂ ಮಂಜಿಂದರ್ ಸಿಂಗ್ ಶಿರ್ಸಾ ಸಲ್ಲಿಸಿದ ದೂರಿನ ಕಾರಣಕ್ಕೆ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ ಎನ್ನಲಾಗ್ತಾಯಿದೆ. 2019ರ ಜುಲೈ 28ರಂದು ನಮ್ಮ ಮನೆಯಲ್ಲಿ ಮಾಡಲಾದ ಪಾರ್ಟಿ ಬಗ್ಗೆ ಈಗಾಗಲೇ ಅನೇಕ ಸುಳ್ಳು ಮಾಹಿತಿ ಪ್ರಸಾರ ಆಗಿದೆ. ಅದರ ಬಗ್ಗೆ ನಾನು ಈ ಹಿಂದೆಯೇ ಸ್ಪಷ್ಟನೆ ಕೊಟ್ಟಿದ್ದೆ. ಈಗ ಮತ್ತೆ ಹೇಳುತ್ತಿದ್ದೇನೆ. ಆ ಪಾರ್ಟಿಯಲ್ಲಿ ಯಾವುದೇ ರೀತಿಯ ಮಾದಕ ವಸ್ತು ಸೇವನೆ ಮಾಡಲಾಗಿಲ್ಲ’ ಎಂದು ಕರಣ್ ಜೋಹರ್ ಈ ಹಿಂದೆಯೇ ಹೇಳಿಕೆ ನೀಡಿದ್ದರು.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version