ಸಿನಿಮಾ

ಮದುವೆ ಆಗಿ ಎರಡೇ ತಿಂಗಳಿಗೆ ಗುಡ್ ನ್ಯೂಸ್ ಕೊಟ್ಟ ಬಾಲಿವುಡ್ ನ ಖ್ಯಾತ ಗಾಯಕಿ..!

Published

on

ಬಾಲಿವುಡ್ ನ ಖ್ಯಾತ ಗಾಯಕಿ ನೇಹಾ ಕಕ್ಕರ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಆಗಿ 2 ತಿಂಗಳು ಕಳೆದಿದ್ದು, ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೌದು ಮದುವೆ ಆಗಿ ಎರಡೇ ತಿಂಗಳಿಗೆ ನೇಹಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇತ್ತೀಚೆಗೆ ತನ್ನ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪತಿ ಜೊತೆಯಿರುವ ಒಂದು ಫೊಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಇದೀಗ ಆ ಫೋಟೊ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.ಆ ಫೊಟೊ ಬೇಬಿ ಬಂಪ್ ತೋರಿಸುವಂತಿದೆ. ಪೋಟೊ ಶೇರ್ ಮಾಡಿರುವ ನೇಹಾ ಯಾವುದೇ ರೀತಿಯಾ ಕ್ಯಾಪ್ಚನ್ ಪೋಟೊಗೆ ನೀಡಿಲ್ಲ, ಬದಲಿಗೆ ಕಾಳಜಿ ವಹಿಸು ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಈ ಫೋಸ್ಟ್ ಗೆ ಪತಿ ರೋಹನ್ ಕೂಡ ಕಾಮೆಂಟ್ ಮಾಡಿದ್ದು, ಇನ್ನು ಮುಂದೆ ನಾನಿ ಇನ್ನಷ್ಟು ಕೇರ್ ಮಾಡಬೇಕು ನೇಹೂ ಎಂದು ತಿಳಿಸಿದ್ದಾರೆ. ಸದ್ಯ ಈ ದಂಪತಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಬಹಿರಂಗಪಡಿಸಿಲ್ಲದಿದ್ದರು ಎಲ್ಲೊ ಒಂದು ಕಡೆ ಇದು ನಿಜ ಅನ್ನಿಸಿರೊದೆಂತು ನಿಜ. ಇನ್ನೂ ನೇಹಾ ಹಂಚಿಕೊಂಡಿರುವ ಫೋಟೊಗೆ ಸಾಕಷ್ಟು ಕಾಮೆಂಟ್ ಗಳ ಮಹಾಪೂರವೇ ಹರಿದು ಬಂದಿದ್ದು, ನೀವು ಗರ್ಭೀಣಿಯಾಗಿರುವುದು ನಿಜವಾ ಎಂದೆಲ್ಲಾ ಕಾಮೆಂಟ್ ಗಳು ಬಂದಿದ್ದು, ನೇಹಾ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯಿಸದೇ ಸುಮ್ಮನಿದ್ದರೆ.

Click to comment

Trending

Exit mobile version