ಸಿನಿಮಾ

ವೇಗಿ ಬ್ರೆಟ್ ಲೀ ಅವರಿಂದ ವಿರಾಟ್ ದಂಪತಿಗೆ ಸಿಕ್ತು ಭರ್ಜರಿ ಆಫರ್..!

Published

on

ಆಸ್ಟ್ರೇಲಿಯಾದ ವೇಗಿ ಬ್ರೆಟ್ ಲೀ ಅವರು ಭಾರತೀಯ ಕ್ರೀಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರಿಗೆ ಒಂದು ಆಫರ್ ನೀಡಿದ್ದಾರೆ. ಆಸ್ಟ್ರೇಲಿಯಾ ಜನತೆ ನಿಮ್ಮನ್ನು ಒಪ್ಪಿಕೊಂಡಿರುವುದಲ್ಲದೆ, ನಿಮ್ಮ ಮಗುವಿನ ಜನನ ಆಸ್ಟ್ರೇಲಿಯಾದಲ್ಲಿಯೇ ಬೇಕಿದ್ದರೂ ಆಗಲಿ ಎಂದಿದ್ದಾರೆ. ವಿರಾಟ್ ಕೊಹ್ಲಿ ಅವರು ಪ್ರಸ್ತುತ ಆಸ್ಟ್ರೇಲಿಯಾದ ಕ್ರಿಕೆಟ್ ಮ್ಯಾಚ್ನಲ್ಲಿ ಬ್ಯುಸಿಯಾಗಿದ್ದು, ಜನವರಿ ತಿಂಗಳಲ್ಲಿ ಅನುಷ್ಕಾಶರ್ಮಾ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ಮ್ಯಾಚ್ ನಂತರ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಲಿದ್ದಾರಂತೆ. ಸಂದರ್ಶನವೊಂದರಲ್ಲಿ ಬ್ರೆಟ್ ಲೀ ಅವರು ‘ವಿರಾಟ್ ಕೊಹ್ಲಿ ಅವರೇ ನಿಮಗೆ ಇಷ್ಟವಿದ್ದರೆ ನಿಮ್ಮ ಮಗುವಿನ ಜನನ ಆಸ್ಟ್ರೇಲಿಯಾದಲ್ಲಿ ಆಗಲಿ. ನಾವು ನಿಮ್ಮನ್ನು ಒಪ್ಪಿಕೊಂಡಿದ್ದೇವೆ. ನಿಮಗೆ ಪುಟ್ಟ ಮಗಳು, ಪುಟ್ಟ ಮಗು ಹುಟ್ಟಿದರೂ ಕೂಡ ಒಳ್ಳೆಯದು’ ಎಂದು ಹೇಳಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version