ಬೆಂಗಳೂರು

ಕೊಂಚ ಮಟ್ಟಿಗೆ ಏರಿಕೆಯಾದ ಅಡುಗೆ ಎಣ್ಣೆ ಬೆಲೆ..!

Published

on

ಬೆಂಗಳೂರು: ಕೊರೊನಾದಿಂದ ತತ್ತರಿಸಿದ್ದ ಜನತೆಗೆ ಇದೀಗ ಬೆಲೆ ಏರಿಕೆಯೂ ಜೀವನವನ್ನು ಸುಡುವಂತಾಗಿದೆ. ಲಾಕ್ಡೌನ್ ತೆರವಾದ ಬಳಿಕ ಅಡುಗೆ ಎಣ್ಣೆ ಬೆಲೆಯಲ್ಲಿ ಕೊಂಚ ಮಟ್ಟಿಗೆ ಏರಿಕೆ ಕಂಡಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬೆನ್ನಲ್ಲೇ ದೈನಂದಿನ ಬಳಕೆಯ ಅಡುಗೆ ಎಣ್ಣೆ ಬೆಲೆ ಕೂಡ ಸುಮಾರು ಶೇ.35 ರಿಂದ 45 ರಷ್ಟು ಏರಿಕೆಯಾಗಿದೆ. ಲಾಕ್ಡೌನ್ಗೂ ಮುನ್ನ ಕಡಿಮೆ ಇದ್ದ ತೈಲ ಬೆಲೆ ಇದೀಗ ಹೆಚ್ಚಾಗಿದೆ. 100 ರೂಪಾಯಿ ಇದ್ದ ಬೆಲೆ 130 ರಿಂದ 140 ರೂಪಾಯಿಗಳಷ್ಟು ಹೆಚ್ಚಾಗಿದೆ. ಪಾಮ್ ಎಣ್ಣೆ ಬೆಲೆ ಆರು ತಿಂಗಳ ಹಿಂದೆ ಲೀಟರ್ಗೆ 65 ರಿಂದ 75 ರೂಪಾಯಿಯಷ್ಟು ಇತ್ತು. ಆದರೆ ನಂತರ 100 ರೂಪಾಯಿಯಿಂದ 120 ರೂಪಾಯಿಯಷ್ಟಾಗಿದೆ. ಇನ್ನು ಅಡುಗೆ ಎಣ್ಣೆಯಲ್ಲಿ ಏರಿಕೆ ಕಾರಣ ಬೇರೆ ಬೇರೆ ದೇಶಗಳಿಂದ ಪಾಮ್ ಎಣ್ಣೆಯನ್ನು ಆಮದು ಮಾಡಲಾಗುತ್ತಿತ್ತು. ಆದರೆ ಇದೀಗ ಕೊರೊನಾದಿಂದಾಗಿ ಇದಕ್ಕೆ ಅಡ್ಡಿಯಾಗಿದೆ ಆದ್ದರಿಂದ ತೈಲ ಬೆಲೆ ಕೊಂಚ ಮಟ್ಟಿಗೆ ಏರಿಕೆಯಾಗಿದೆ ಎನ್ನಲಾಗುತ್ತಲಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version