Uncategorized

ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ..!

Published

on

ಮಾಲೂರು: ಕುಡಿದ ಮತ್ತಿತಲ್ಲಿ ಇಬ್ಬರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಸಂತೆಬೀದಿಯಲ್ಲಿ ನಡೆದಿದೆ. ಮೃತ ದುರ್ದೈವಿ 30 ವರ್ಷದ ಚೈನ್ ಬಾಬು ಎಂದು ತಿಳಿದು ಬಂದಿದ್ದು ಇತ ಮಾಲೂರಿನ ವಿವಾಸಿ ಎನ್ನಲಾಗುತ್ತಿದೆ. ಚೈನ್ ಬಾಬು ಇತ್ತೀಚೆಗೆ ಸ್ನೇಹಿತ ಜಿಮ್ ಶಶಿ ಹತ್ತಿರ ಕೈಸಾಲ ಮಾಡಿದ್ದರು, ಶಶಿ ಹಣ ವಾಪಾಸ್ಸ್ ಕೇಳಲು ಹೋದಾಗ ಇಬ್ಬರ ನಡುವೆ ಮಾತಿನ ಚಕಮಖಿ ಶುರುವಾಗಿದೆ. ಜಗಳ ತೀವ್ರ ವಿಕೋಪಕ್ಕೆ ತೆರಳಿ ಶಶಿ ಮಚ್ಚಿನಿಂದ ಚೈನ್ ಬಾಬು ಮೇಲೆ ಹಲ್ಲೇ ನಡೆಸಿ ಸ್ವತಹ ತಾನೇ ಪೋಲಿಸ್ ಠಾಣೆಗೆ ಹೋಗಿ ತಪ್ಪೊಪ್ಪಿ ಕೊಂಡು ಪೋಲಿಸರಿಗೆ ಶರಣಾಗಿದ್ದಾನೆ. ಇನ್ನೂ ಈ ಪ್ರಕರಣ ಮಾಲೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವರದಿ-ಮಾರುತೇಶ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಮಾಲೂರು

Click to comment

Trending

Exit mobile version