ಸಿನಿಮಾ

ಕೆ.ಜಿಎಫ್ ಚಾಪ್ಟರ್-2 ಟಿಸರ್ ಬಿಡುಗಡೆಗೆ ದಿನಾಂಕ ಫೀಕ್ಸ್..!

Published

on

ಯಶ್ ನಟನೆಯ’ಕೆಜಿಎಫ್: ಚಾಪ್ಟರ್ 2′ ಸಿನಿಮಾ ಬಗ್ಗೆ ಸಿನಿಪ್ರಿಯರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರತಂಡದಿಂದ ಸಿಗುವ ಎಲ್ಲ ಅಪ್ಡೇಟ್ಗಳಿಗಾಗಿ ಯಶ್ ಫ್ಯಾನ್ಸ್ ಕಾಯುತ್ತಿರುತ್ತಾರೆ. ಅಂಥವರಿಗಾಗಿ ನಿರ್ದೇಶಕ ಪ್ರಶಾಂತ್ ನೀಲ್ ಗುಡ್ ನ್ಯೂಸ್ ನೀಡಿದ್ದಾರೆ.
‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಕೆಜಿಎಫ್ ಚಾಪ್ಟರ್-2’ ಸಿನಿಮಾದ ಟೀಸರ್ ಯಾವಾಗ ಬರಲಿದೆ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಸೋಶಿಯಲ್ ಮೀಡಿಯಾ ಮೂಲಕ ನಿರ್ದೇಶಕ ಪ್ರಶಾಂತ್ ನೀಲ್ ಸಿಹಿ ಸುದ್ದಿ ನೀಡಿದ್ದಾರೆ.ಜ.8ರಂದು ಟೀಸರ್ ಬಿಡುಗಡೆ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣ ಆಗಿದೆ. ಆ ಸಾಮ್ರಾಜ್ಯದ ಒಂದು ನೋಟ. ಇದನ್ನು ಸೃಷ್ಟಿಸಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿರಬಹುದು.ಆದರೆ ನಾವು ಇನ್ನಷ್ಟು ಬಲಿಷ್ಟವಾಗಿ, ದೊಡ್ಡದಾಗಿ ಆಗಮಿಸುತ್ತಿದ್ದೇವೆ. ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಜ.8ರಂದು ಬೆಳಗ್ಗೆ 10.18ಕ್ಕೆ ಕೆಜಿಎಫ್ ಚಾಪ್ಟರ್ 2 ಟೀಸರ್ ಬಿಡುಗಡೆ ಆಗಲಿದೆ ಎಂದು ಪ್ರಶಾಂತ್ ನೀಲ್ ಟ್ವೀಟ್ ಮಾಡಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು.

Click to comment

Trending

Exit mobile version