ಮಂಡ್ಯ

ಡಿಸೆಂಬರ್-22ರಂದು ನಡೆಯಲಿರುವ ಗ್ರಾ.ಪಂ ಚುನಾವಣೆಗೆ ಸಕಲ ಸಿದ್ದತೆ..!

Published

on

ಮಳವಳ್ಳಿ: ಡಿ22ರಂದು ನಡೆಯಲಿರುವ ಗ್ರಾಮಪಂಚಾಯಿತಿ ಚುನಾವಣೆಗೆ ತಾಲ್ಲೂಕು ಆಢಳಿತದ ವತಿಯಿಂದ ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನ ಆವರಣದಲ್ಲಿ ಪೂರ್ವ ಸಿದ್ದತೆಗಳು ಭರದಿಂದ ಸಾಗಿದ್ದು, ಚುನಾವಣಾ ಸಿಬ್ಬಂದಿಗಳು ಮತಪೆಟ್ಟಿಗೆಯೊಂದಿಗೆ ನೇಮಕವಾದ ಗ್ರಾಮಗಳಿಗೆ ತೆರಳುತ್ತಿದ್ದಾರೆ. ಮಳವಳ್ಳಿ ತಾಲ್ಲೂಕಿನಾಧ್ಯಂತ ಬೆಳಕವಾಡಿ ಗ್ರಾಮಪಂಚಾಯಿತಿಯನ್ನು ಹೊರತುಪಡಿಸಿ ಉಳಿದ 38 ಗ್ರಾಮಪಂಚಾಯಿತಿಗೆ ಚುನಾವಣೆ ನಡೆಯುತ್ತಿದ್ದು, ೧೮೬೪೨೨ ಮತದಾರರು ಅಭ್ಯರ್ಥಿಗಳ ಹಣೆಬರಹವನ್ನು ಬರೆಯಲಿದ್ದಾರೆ. ತಾಲ್ಲೂಕಿನ ೨೯೪ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ೭೨ ಸೂಕ್ಷ ಮತಗಟ್ಟೆ, ೨೨೨ ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಿದ್ದು, ೧೩೯೮ ಮತಗಟ್ಟೆಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ, ಮತಪೆಟ್ಟಿಗೆಯನ್ನು ಸಾಗಿಸಲು 45 ಸಾರಿಗೆ ಬಸ್,೯ ಟೆಂಪೂ, ೯ ಜೀಪ್ಗಳನ್ನು ಬಳಸಿಕೊಳ್ಳಲಾಗಿದೆ, ಕೋವಿಡ್ 19 ನಿಯಮದಡಿಯಲ್ಲಿ ಎಲ್ಲಾ ಮತ ಕೇಂದ್ರಗಳಲ್ಲಿ ಸ್ಯಾನೀಟೈಸರ್ ಅನ್ನು ಮಾಡಲಾಗಿದೆ, ಸಿಬ್ಬಂದಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ವಹಿಸಿಕೊಳ್ಳಲಾಗಿದ್ದು, ಮತದಾರರು ಕಡ್ಡಾಯವಾಗಿ ಮಾಸ್ಕ್ ಬಳಸಿ ಮತದಾನ ಮಾಡಬೇಕೆಂದು ಎಂದು ತಹಶೀಲ್ದಾರ್ ಚಂದ್ರಮೌಳಿ ತಿಳಿಸಿದ್ದಾರೆ. ಇನ್ನೂ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 2 ಡಿವೈಎಸ್ಪಿ, 3 ಸರ್ಕಲ್ ಇನ್ಸ್ಪೇಕ್ಟರ್, 5 ಸಬ್ ಇನ್ಸ್ಪೇಕ್ಟರ್ ಸೇರಿದಂತೆ 4೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಹಾಗೂ ಹೋಂ ಗಾಡ್ಸ್ ಬಳಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ಚುನಾವಣಾ ಪೂರ್ವ ಸಿದ್ದತೆಗಳನ್ನು ಉಪವಿಭಾಗ ಅಧಿಕಾರಿ ನೇಹಾಜೈನ್ ಹಾಗೂ ಚುನಾವಣಾವೀಕ್ಷಕ ಲೋಕನಾಥ್ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version