ಸಿನಿಮಾ

ನಿರ್ದೇಶಕ ಪವನ್ ಒಡೆಯರ್ ಮನೆಗೆ ಭೇಟಿ ಕೊಟ್ಟ ಆರೋಗ್ಯ ಸಚಿವ ಡಾ. ಕೆ.ಸುಧಾಕರ್..!

Published

on

‘ಗೂಗ್ಲಿ’ ಸಿನಿಮಾ ನಿರ್ದೇಶಕ ಪವನ್ ಒಡೆಯರ್ 2018ರಲ್ಲಿ ಪವನ್ ಹಾಗೂ ಅಪೇಕ್ಷಾ ಬಾಗಲಕೋಟೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.ವಿಶೇಷವಾದ ಫೋಟೋಶೂಟ್ ಮೂಲಕ ಈ ಜೋಡಿ ಅಪ್ಪ-ಅಮ್ಮ ಆಗಿ ಬಡ್ತಿ ಪಡೆಯುತ್ತಿರುವ ವಿಷಯವನ್ನು ತಿಳಿಸಿದ್ದರು. ಡಿಸೆಂಬರ್ 10ರಂದು ಅಪೇಕ್ಷಾ ಪುರೋಹಿತ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಆಸ್ಪತ್ರೆಯಲ್ಲಿ ಮಗು ಹಾಗೂ ಅಪೇಕ್ಷಾ ಜೊತೆಗಿರುವ ಫೋಟೋ ಹಾಕಿ ಪವನ್ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದರು. ಅನೇಕರು ಈ ಜೋಡಿಗೆ ಶುಭ ಹಾರೈಸಿದ್ದು, ಪವನ್ ಪಡೆಯರ್ ಹುಟ್ಟುಹಬ್ಬದ ದಿನವೇ ಮಗು ಹುಟ್ಟಿರೋದು ವಿಶೇಷ.’ಬರ್ತ್ಡೇ ದಿನವೇ ನನಗೆ ಅದ್ಭುತವಾದ ಉಡುಗೊರೆ ಸಿಕ್ಕಿದೆ. ಗಂಡು ಮಗು ಜನಿಸಿದೆ. ಜೈ ಚಾಮುಂಡೇಶ್ವರಿ’ ಎಂದು ಪವನ್ ಟ್ವೀಟ್ ಮಾಡಿ ಖುಷಿ ವ್ಯಕ್ತಪಡಿಸಿದ್ದರು. ಇದೀಗ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಪವನ್ ಒಡೆಯರ್ ಮನೆಗೆ ಭೇಟಿ ಕೊಟ್ಟು ಮಗುವಿನ ಆರೋಗ್ಯವನ್ನು ವಿಚಾರಿಸಿದ್ದಾರೆ. ಇನ್ಣೂ ಪವನ್ ಒಡೆಯರ್ ಫೋಟೊಗಳನ್ನು ಸೋಶಿಯಾಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದು ,ಒಂದು ಕ್ಯಾಫ್ಚನ್ ನೀಡಿದ್ದಾರೆ.‘ನಿಮ್ಮ ಈ ಅದ್ಭುತ ವ್ಯಕ್ತಿತ್ವಕ್ಕೆ ಮೂಕನಾಗಿದ್ದೀನಿ ಸರ್. ನಿಮ್ಮೆಲ್ಲ ಕೆಲಸದ ಒತ್ತಡಗಳ ನಡುವೆಯೂ ಮನೆಗೆ ಆಗಮಿಸಿ ನನ್ನ ಮಗುವನ್ನು ಆಶೀರ್ವದಿಸಿದ ನಿಮಗೆ ನಾನು ಚಿರಋಣಿ’ಎಂದು ಪವನ್ ಒಡೆಯರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಇನ್ನೂ ಈ ಬಗ್ಗೆ ಯುವ ಪ್ರತಿಭಾನ್ವಿತ ನಿರ್ದೇಶಕ ಶ್ರೀ ಪವನ್ ಒಡೆಯರ್ ಅವರ ಮನೆಗೆ ಭೇಟಿ ನೀಡಿ,ಪವನ್ ಅಪೇಕ್ಷಾ ದಂಪತಿಗಳ ಚೊಚ್ಚಲ ಮಗುವಿಗೆ ಶುಭ ಹಾರೈಸಲಾಯಿತು’ಎಂದು ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version