ಲೈಫ್ ಸ್ಟೈಲ್

ಬೇವು ತಿನ್ನೊದ್ರಿಂದ ದೇಹಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ..!

Published

on

ಬೇವು ತನ್ನ ವಿಶೇಷವಾದ ಔಷಧೀಯ ಗುಣಗಳಿಂದ ಪ್ರಾಚೀನ ಆಯುರ್ವೇದ ಪದ್ದತಿಯಿಂದ ಇಂದಿನವರೆಗೂ ಅನೇಕ ರೋಗ ರುಜಿನಗಳಿಗೆ , ಚರ್ಮದ ಸಮಸ್ಯೆಗಳಿಗೆ ಒಳ್ಳೆಯ ಔಷಧಿಯಾಗಿ ಬಳಸಲ್ಪಡುತ್ತದೆ. ಆದರೆ ಯಾವುದೇ ಪದಾರ್ಥಗಳನ್ನು ಅಷ್ಟೇ ದೇಹಕ್ಕೆ ಅತೀಯಾದರೆ ಅದರಿಂದ ನಾನಾ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಬೇವು ಕೂಡ ಹಾಗೇ ಇದರ ಅತಿಯಾದ ಸೇವನೆ ದೇಹಕ್ಕೆ ಕುಂದು ಕೊರತೆ ತರುವುದರಲ್ಲಿ ಎರಡನೇ ಮಾತಿಲ್ಲ.ಬೇವಿನ ಅತೀಯಾದ ಸೇವನೆಯಿಂದ ಯಾವೆಲ್ಲಾ ರೀತಿಯ ಅಡ್ಡ ಪರಿಣಾಮಗಳು ಉಂಟಾಗುತ್ತದೆ.
1)ಅಲರ್ಜಿಗೆ ಕಾರಣವಾಗಬಹುದು- ಬೇವಿನ ಎಲೆಗಳನ್ನು ಪ್ರತಿ ದಿನ ಮೂರು ವಾರಗಳ ತನಕ ಬೆಡದೇ ಸೇವಿಸಿದರೆ ಬಾಯಿಯ ಊರಿಯೂತದ ಸಮಸ್ಯೆ ಕಂಡು ಬರುತ್ತದೆ. ಬೇವಿನ ಎಲೆಗಳನ್ನು ಅಲರ್ಜಿ, ಗುಳ್ಳೆಗಳು, ಮೊಡವೆಗಳು ಇತ್ಯಾದಿ ಸಮಸ್ಯೆಗಳಿಗೆ ಉಪಾಯೋಗಿಸುತ್ತಾರೆ. ಆದ್ರೆ ಇದರ ಹೆಚ್ಚಾದ ಬಳಕೆ ಸಮಸ್ಯೆಯನ್ನು ಹೋಗಾಲಾಡಿಸುವ ಬದಲು ಇನ್ನಷ್ಟು ಜಾಸ್ತಿ ಮಾಡುತ್ತದೆ..
2)ಫಲವತ್ತತೆ ಕುಂಠಿತಗೊಳ್ಳ ಬಹುದು- ಫಲವತ್ತತೆಯ ವಿಷಯದಲ್ಲಿ ಸಂಶೋದಕರು ಬೇವಿನ ಹೂವುಗಳ ಸಾರವನ್ನು ಬಳಸಿ ಇಲಿಗಳ ಮೇಲೆ ಪ್ರಯೋಗ ನಡೆಸಿದಾಗ ಅವುಗಳಲ್ಲಿ ಅಂಡೋತ್ಪತ್ತಿಯು ಭಾಗಶಃ ನಿರ್ಬಂಧವಾಗಿರುವುದು ಕಂಡು ಬಂದಿದೆ. ಆದ್ದರಿಂದ ಬೇವಿನ ಎಲೆಗಳನ್ನು ಜನರು ಅತಿಯಾಗಿ ಬಳಸುವುದರಿಂದ ಈ ರೀತಿಯಾ ಅಡ್ಡ ಪರಿಣಾಮಗಳು ತುತ್ತಾಗ ಬಹುದು ಎಂದು ಸಂಶೋದನೆಯ ಪ್ರಕಾರ ಸಾಬೀತಾಗಿದೆ.
3)ಗರ್ಭಪಾತಕ್ಕೆಕಾರಣವಾಗ ಬಹುದು- ಪ್ರಾಣಿಗಳ ಅಧ್ಯಯನಗಳಲ್ಲಿ ಬೇವಿನ ಸಾರ ಗರ್ಭಧಾರಣೆಯನ್ನು ಪ್ರೇರೇಪಿಸುತ್ತದೆ. ರೋಡೆಂಟ್ ಗಳು ಮತ್ತು ಮಂಗಗಳಲ್ಲಿ ಬೇವಿನ ಸಾರ ಗರ್ಭಾವಸ್ಥೆಯನ್ನು ಸ್ಥಗಿತಗೊಳಿಸುವುದು ಸಾಬೀತಾಗಿರುವುದರಿಂದ ಮಕ್ಕಳು ಬೇಕು ಅನ್ನುವವರಿಗೆ ಹಾಗೂ ಬೇಡ ಅನ್ನುವವರಿಗೆ ಈ ಬೇವಿನ ಉಪಯೋಗ ಬೇಡ ಎಂದು ವಿಜ್ಞಾನಿಗಳು ವಾದಿಸಿದ್ದಾರೆ..
4) ಮೂತ್ರ ಪಿಂಡಗಳಿಗೆ ಹಾನಿ ಉಂಟಾಗಬಹುದು-ಒಂದು ಅಧ್ಯಯನ ತಿಳಿಸಿರುವ ಪ್ರಕಾರ ಒಬ್ಬ ವ್ಯಕ್ತಿಯಲ್ಲಿ ಚೀನೀ ಗಿಡಮೂಲಿಕೆಗಳನ್ನು ಸೇವಿಸಿದ ನಂತರ ತೀವ್ರ ಮೂತ್ರ ಪಿಂಡದ ವೈಪಲ್ಯ ಕಂಡು ಬಂದಿರುವುದು ಬೆಳಕಿಗೆ ಬಂದಿದ್ದು ಆ ಗಿಡ ಮೂಲಿಕೆಯ ಔಷದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೇವು ಇದ್ದಿದ್ದು ಬೆಳಕಿಗೆ ಬಂದಿದೆ. ಬೇವಿನ ಸೇವನೆಗೂ ಕಿಡ್ನಿ ವೈಪಲ್ಯಕ್ಕೂ ನೇರವಾದ ಸಂಬಂಧ ಇಲ್ಲದಿದ್ದರೂ ಜಾಗರೂಕತೆಯಿಂದ ಇರುವುದು ಒಳ್ಳೆಯದು.
5)ಬ್ಲಡ್ಶುಗರ್ಮಟ್ಟವನ್ನುತೀರಾಕಡಿಮೆಮಾಡಬಹುದು-ಬೇವು ಮತ್ತು ಪಾಲಕ್ಸೊಪ್ಪಿನ ಸಂಯೋಜನೆ ಮನುಷ್ಯನ ದೇಹದಲ್ಲಿ ಹೈಪೋಟೆನ್ಸಿವ್ಗುಣ ಲಕ್ಷಣಗಳನ್ನು ತೊರಿಸುತ್ತದೆ ಎಂದು ಸಂಶೊದಕರು ತಿಳಿಸಿದ್ದು. ವೈಧ್ಯರು ಮಧು ಮೇಹ ರೋಗಿಗಳಿಗೆ ಸಕ್ಕರೆ ಅಂಶದ ನಿಯಂತ್ರಣಕ್ಕೆ ಸಣ್ಣ ಪ್ರಮಾಣದ ಬೇವಿನ ಎಣ್ಣೆಯನ್ನು ಸೇವಿಸಲು ಹೇಳಿರುತ್ತಾರೆ. ವೈಧ್ಯರ ಸಲಹೆ ಮೀರಿ ಅವರು ಸೂಚಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಬೇವಿನ ಎಣ್ಣೆಯನ್ನು ಸೇವಿಸಿದರೆ ದೇಹದರಕ್ತದಲ್ಲಿರುವ ಸಕ್ಕರೆ ಅಂಶದ ಪ್ರಮಾಣ ತೀರಾ ತಳಹದಿಗೆ ಹೋಗಿ ಅತೀಯದಾ ಆಯಾಸ ತಲೆ ಸುತ್ತು ಶುರುವಾಗುತ್ತದೆ.
6) ಶಿಶುಗಳ ಮಾರಣ ಹೋಮಕ್ಕೆ ಕಾರಣವಾಗಬಹುದು-ಬೇವು ಪುಟ್ಟ ಕಂದಮ್ಮಗಳಿಗೆ ವಿಷಕಾರಿ, ಕೇವಲ 5ಎಂಎಲ್ ನಷ್ಟು ಬೇವಿನ ಎಣ್ಣೆ ಹಸುಗೂಸುಗಳ ಸಾವಿಗೆ ಕಾರಣವಾಗಿರುವುದು ಕಂಡು ಬಂದಿದೆ. .ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಬೇವಿನ ಎಣ್ಣೆಯ ವಿಷ ಪ್ರತಿ ಕಿಲೋಗ್ರಾಂಗೆ 12 ರಿಂದ 24 ಎಂಎಲ್ ನ ಪ್ರಮಾಣದಲ್ಲಿರುತ್ತದೆ ಎಂದು ಸೂಚಿಸಲಾಗಿದೆ.
7)ಹೊಟ್ಟೆಯಲ್ಲಿ ಕಿರಿ ಕಿರಿ ಉಂಟು ಮಾಡಬಹುದು- ವಿಪರೀತ ಬೇವಿನ ಸೇವನೆ ಹೊಟ್ಟೆಯಲ್ಲಿ ಅಜೀರ್ಣತೆ ಮತ್ತು ಹೊಟ್ಟೆ ತೊಳೆಸಿದಂತಹ ಕಿರಿಕಿರಿಯ ಅನುಭವವನ್ನು ಉಂಟು ಮಾಡುತ್ತದೆ.
8) ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯನ್ನು ಪ್ರಚೋದಿಸ ಬಹುದು- ಬೇವು ಯುಕ್ತ ಉತ್ಪನ್ನಗಳನ್ನು ಸೇವಿಸುವುದರಿಂದ ಮನುಷ್ಯನ ರೋಗ ನಿರೋಧಕ ಶಕ್ತಿಯ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ಕೆಲ ತಜ್ಙರು ಹೇಳುವ ಪ್ರಕಾರ ಬೇವಿನ ವಿಪರೀತ ಸೇವನೆ, ಮನುಷ್ಯನ ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯನ್ನು ಬಹಳಷ್ಟು ಪ್ರಚೋದನೆಗೊಳಿಸಿ ಸಾಕಷ್ಟು ತೊಂದರೆಗಳನ್ನು ಉಂಟು ಮಾಡುತ್ತದೆ.
ಬೇವಿನ ಎಲೆಗಳನ್ನು ಬಳಸುವುದರಿಂದ ಯಾವೇಲ್ಲಾ ರೀತಿಯ ಅನುಕೂಲಗಳು ಆಗುತ್ತದೆಯೋ ಅಷ್ಟೇ ಅನಾನುಕೂಲಗಳು ಕೂಡ ಉಂಟಾಗುತ್ತದೆ ಅನ್ನೊದನ್ನತಿಳಿಸಿದ್ದಿವಿ. ನಾವು ಯಾವ್ದೇ ಪದಾರ್ಥಗಳಾದ್ರು ಸಹ ಇತಿ ಮಿತಿಯಾಗಿ ಬಳಸಬೇಕು .ಇಲ್ಲದಿದ್ದರೆ ನಾನಾ ರೀತಿಯ ತೊಂದರೆಗಳಿಗೆ ತುತ್ತಾಗುವುದು ಗ್ಯಾರಂಟಿ..

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Click to comment

Trending

Exit mobile version