ಚಿಕ್ಕಬಳ್ಳಾಪುರ

ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿ ಸ್ಥಾನ ಖಾಯಂಗೊಳಿಸುವಂತೆ ಮಾತಿನ ಒತ್ತಾಯ..!

Published

on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಹೊರವಲಯದಲ್ಲಿರುವ ಕಣಿತಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ನಂಜಪ್ಪ ನಿವೃತ್ತಿ ಹೊಂದಿದ ಬಳಿಕ ಅಲ್ಲಿ ಇರುವಂತಹ ಕಮಿಟಿ ಅಂಗಮಿ ಕಾರ್ಯದರ್ಶಿಯಾಗಿ ಮುನಿಕೃಷ್ಣ ಅವರನ್ನು ಆಯ್ಕೆ ಮಾಡಿದ್ದು. ಇದೀಗ ಸತತವಾಗಿ 10 ತಿಂಗಳು ಕಳೆದಿದೆ ಇದುವರೆಗೂ ಕಾಯಂ ಕಾರ್ಯದರ್ಶಿಯನ್ನಾಗಿ ಕಮಿಟಿಯು ನೇಮಕ ಮಾಡಿರುವುದಿಲ್ಲ, ಆದಕಾರಣ ಸರ್ವ ಸದಸ್ಯರ ಸಾಮಾನ್ಯ ಮಹಾಸಭೆಯಲ್ಲಿ ಸಹಕಾರ ಸಂಘದ ಲೋಪದೋಷಗಳು ಹಾಗೂ ಪದವೀಧರರನ್ನು ಕಾರ್ಯದರ್ಶಿಯಾಗಿ ಕಾಯಂಗೊಳಿಸುವ ಬಗ್ಗೆ ಸದಸ್ಯರಿಗೂ ಹಾಗೂ ಕಾರ್ಯಕಾರಿ ಮಂಡಳಿಯವರಿಗೆ ಮಾತಿನ ಚಕಮುಕಿ ಹಾಗೂ ವಾದ ವಿವಾದಗಳು ನಡೆಯಿತು. ತದನಂತರ ಸಭೆ ಪ್ರಾರಂಭವಾದ ಬಳಿಕ ಸದಸ್ಯರಿಂದ ಹಂಗಾಮಿ ಕಾರ್ಯದರ್ಶಿಗೆ ಹಾಗೂ ಮಂಡಳಿಗೆ ಬಹಳಷ್ಟು ಸಮಯ ತನಕ ಮಾತಿನ ಚಕಮಕಿ ನಡೆದಿದ್ದು, ತದನಂತರ ಎಲ್ಲಾ ಸದಸ್ಯರು ಸೇರಿ ಕಮಿಟಿಗೆ ಆದಷ್ಟು ಬೇಗನೆ ಕಾರ್ಯದರ್ಶಿ ಸ್ಥಾನಕ್ಕೆ ಪದವೀಧರರನ್ನು ಕಾಯಂಗೊಳಿಸಬೇಕು ಎಂ ದು ಎಚ್ಚರಿಕೆ ನೀಡಿದ್ದಾರೆ. ನಂತರ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಅವರು ಬಂದು ಮಂಡಳಿಗೂ ಹಾಗೂ ಸದಸ್ಯರಿಗೂ ಮಾತಿನ ಚಕಮಕಿಯಿಂದ ತಲ್ಲಣಗೊಳಿಸಿದ್ದರೆ.

ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Click to comment

Trending

Exit mobile version