Uncategorized

ದೇವಾಂಗ ಸಮಾಜದ ಅಭಿವೃದ್ದಿ ನಿಗಮ ಸ್ಥಾಪನೆಗೆ – ಕಾಶಿನಾಥ್ ಪೂಜಾರಿ ಆಗ್ರಹ..!

Published

on

ಶಹಾಪುರ:ದೇವಾಂಗ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ,ಸಾಮಾಜಿಕವಾಗಿ, ಮೊದಲಿನಿಂದಲೂ ಹಿಂದುಳಿದ ಸಮಾಜವಾಗಿದೆ ಈ ಸಮಾಜ ಕಡುಬಡತನದಲ್ಲಿ ಬಂದಿದೆ ಆದ್ದರಿಂದ ಸಮಾಜದ ಏಳಿಗೆಗಾಗಿ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಗ್ರಾಮದ ಯುವ ಮುಖಂಡರಾದ ಕಾಶಿನಾಥ ಪೂಜಾರಿ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.ಕೊರೊನಾ ಸಂಕಷ್ಟಕ್ಕೊಳಗಾದ ದೇವಾಂಗ ಸಮಾಜದ ಕುಟುಂಬಗಳಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಅಲ್ಲದೆ ಹಳೆಯದಾದ ಕೈ ಮಗ್ಗ ಘಟಕಗಳಿಗೆ ಹೊಸ ಕಾಯಕಲ್ಪ ನೀಡಬೇಕು ಎಂದು ಒತ್ತಾಯಿಸಿದರು.ನೆರೆ ರಾಜ್ಯಗಳು ಈ ದೇವಾಂಗ ಸಮಾಜಕ್ಕೆ ಒತ್ತು ನೀಡಿದಷ್ಟು ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ನೋವಿನಿಂದ ಹೇಳಿದರು.ಹೈದ್ರಾಬಾದ್ ಕರ್ನಾಟಕದ ಬಹುತೇಕ ದೇವಾಂಗ ಸಮಾಜದ ಬಡ ಕುಟುಂಬಗಳು ನೇಕಾರಿಕಾ ವೃತ್ತಿಯನ್ನು ಅವಲಂಬಿಸಿವೆ ವೃತ್ತಿಯಿಂದ ಕೊರೋನಾ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾಗಿ ಕುಟುಂಬಗಳು ಬೀದಿಗೆ ಬಿದ್ದಿವೆ ಆದ್ದರಿಂದ ಸರ್ಕಾರ ನೀಡಬೇಕಾದ ಸವಲತ್ತುಗಳು ಬಹುಬೇಗನೆ ನೀಡಲಿ ಎಂಬುದೇ ನಮ್ಮ ಸದಾಶಯ. ಒಂದು ವೇಳೆ ನೀಡದಿದ್ದರೆ ಬೀದಿಗಿಳಿದು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆಂದು ಈ ಮೂಲಕ ಎಚ್ಚರಿಕೆ ನೀಡಿದರು.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Click to comment

Trending

Exit mobile version