Uncategorized

ಇಂಡಿ ತಾಲೂಕನ್ನು ಹಸಿರೀಕರಣ ಮಾಡಲು ಮುಂದಾದ ಶಾಸಕ ಯಶವಂತರಾಯಗೌಡ ಪಾಟೀಲ್..!

Published

on

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ವಿಜಯಪುರ ಜಿಲ್ಲಾ ಪಂಚಾಯತ್ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಲೆಕ್ಕ ಶೀರ್ಷಿಕೆ 2020-21ನೇ ಸಾಲಿನ ಸಾಮಾಜಿಕ ಅರಣ್ಯ ಯೋಜನೆ ಅಡಿಯಲ್ಲಿ ಪಟ್ಟಣದಲ್ಲಿ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳ ಕಛೇರಿ ನಿರ್ಮಾಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ್ ಭೂಮಿ ಪೂಜೆ ನೆರೆವೆರಿಸಿದರು. ಭವಿಷ್ಯದ ಜಿಲ್ಲಾ ಕೇಂದ್ರದಲ್ಲಿ ಎಲ್ಲಾ ಉಪವಿಭಾಗ ಕಛೇರಿಗಳು ಹೊಂದಿದ್ದರೂ ಅರಣ್ಯ ಇಲಾಖೆಗೆ ಸ್ವಂತ ಗೂಡು ಇಲ್ಲ.ಆದರೆ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳ ಕಛೇರಿ ನಿರ್ಮಾಣಕ್ಕೆ ಅಂದಾಜು 35 ಲಕ್ಷ ರೂಪಾಯಿಗಳು ಬಿಡುಗಡೆಗೊಂಡು ಅರಣ್ಯ ಅಧಿಕಾರಿಗಳ ನೂತನ ಕಟ್ಟಡಕ್ಕೆ ಸ್ವಾಗತ ಮಾಡಿಕೊಂಡಂತಾಗಿದೆ.ತಾಲೂಕಿನಲ್ಲಿ ಅಭಿವೃದ್ದಿ ಪರ್ವವೇ ನಡಿದಿದೆ ಆದರೆ ಇನ್ನೂ ಕೆಲವು ಇಲಾಖೆಗಳು ಸ್ವಂತ ಸೂರಿಲ್ಲದೇ ಭಾಡಿಗೆ ಮನೆಯಲ್ಲಿ ಕಛೇರಿ ನಡೆಸುತ್ತಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ್ ತಿಳಿಸಿದರು.ಇನ್ನೂ ಈ ಕಾರ್ಯಕ್ರಮ ದಲ್ಲಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ.

Click to comment

Trending

Exit mobile version