Uncategorized

ರೇಷ್ಮೆ ಸಂಸ್ಕರಣ ಘಟಕದಿಂದ ರೋಗಕ್ಕೆ ತುತ್ತಾಗುತ್ತಿರುವ ಸಾರ್ವಜನಿಕರು – ಭಕ್ತರಹಳ್ಳಿ ಬೈರೇಗೌಡ..!

Published

on

ಶಿಡ್ಲಘಟ್ಟ: ನಮ್ಮ ಅಂತರಾಷ್ಟ್ರೀಯ ಮಟ್ಟದ ಪಟ್ಟಣದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಈ ಭಾಗದ ಜನರು ಪ್ಯೂಪ ಸಂಸ್ಕರಣ ಘಟಕಗಳಿಂದ ಕೆಟ್ಟ ಪರಿಸರ ಉಂಟಾಗಿ ನಾಗರೀಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಹೇಳಿದ್ದಾರೆ. ನಗರಸಭೆ ವ್ಯಾಪ್ತಿಗೆ ಬರುವ ರೇಷ್ಮೆ ಪ್ಯೂಪ ಕಾರ್ಖಾನೆ ಹಾಗೂ ಶೌಚಾಲಯ ಚರಂಡಿ ನೀರನ್ನು ರಾಜಕಾಲುವೆಗೆ ಬಿಡುತ್ತಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ಮಾಡಿದರು. ಅನಾರೋಗಕ್ಕೆ ತುತ್ತಾಗುತ್ತಿದ್ದರು ಸಂಭಂದಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸದೆ ಸಾಕಷ್ಟು ಜನರು ಡೆಂಗ್ಯೂ, ಚಿಕನ್ ಗುನ್ಯಾ, ಚರ್ಮದ ಕಾಯಿಲೆ, ಶ್ವಾಸ ಕೋಶದ ತೊಂದರೆ ಹಾಗೂ ಉಸಿರಾಟಕ್ಕೆ ಸಂಭಂದ ಪಟ್ಟ ಕಾಯಿಲೆಗಳಿಗೆ ಒಳಗಾಗಿ ಬಳಲುತ್ತಿದ್ದಾರೆ. ರೈತ ಸಂಘದ ಪದಾಧಿಕಾರಿಗಳು ಹಾಗೂ ನಗರಸಭೆ ಸದಸ್ಯರು ಬಸ್ ನಿಲ್ದಾಣದಿಂದ ನಗರಸಭೆಯವರೆಗೂ ಪ್ರತಿಭಟನೆ ಮಾಡಲು ಸಿದ್ದರಾಗಿರುವಾಗ ಆಯುಕ್ತ ಶ್ರೀನಿವಾಸ್ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ನಿಮ್ಮ ಮನವಿ ಹಿಂಪಡೆದುಕೊಳ್ಳಿ ನೀವು ಕೊಟ್ಟಿರುವ ಬೇಡಿಕೆಗಳನ್ನು ನಾನು ಸದ್ಯದಲ್ಲೇ ಮೇಲಾಧಿಕಾರಿಗಳ ಗಮನಕ್ಕೆ ತಂದು ನಿಮ್ಮ ಬೇಡಿಕೆ ಹೀಡೇರಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.ಇತ್ತೀಚಿಗೆ ನಗರದಲ್ಲಿ ಸಂಜೆ 7 ಘಂಟೆ ವೇಳೆಗೆ ಇತರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು ನೀವು ಇದನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಬೇಕೆಂದು ನಗರ ಠಾಣೆ ಉಪ ನೀರೀಕ್ಷಕ ಸತೀಶ್ ರವರಿಗೆ ಎಚ್ಚರಿಕೆಯನ್ನು ಸಹ ನೀಡಿದರು.

ವರದಿ- ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Click to comment

Trending

Exit mobile version