ಮಂಡ್ಯ

ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯಾಗಿ ಮಾಡಬೇಕು- ಕೋರೇಗಾಲ ನಾಗೇಂದ್ರ..!

Published

on

ಮಳವಳ್ಳಿ: ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರವನ್ನು ಜೆಡಿಎಸ್ ಬೆಂಬಲಿತರು ಹಿಡಿಯಲಿದ್ದು ಗ್ರಾಮ ಪಂಚಾಯಿತಿಯನ್ನು ಮಾದರಿ ಪಂಚಾಯಿತಿಯನ್ನಾಗಿ ಮಾಡುವುದಾಗಿ ನೂತನ ಗ್ರಾಮ ಪಂಚಾಯಿತಿ ಸದಸ್ಯ ಕೋರೇಗಾಲ ನಾಗೇಂದ್ರ ತಿಳಿಸಿದರು. ಇನ್ನೂ ಗ್ರಾಮ ಪಂಚಾಯಿತಿಯಲ್ಲಿ ಪ್ರಮಾಣ ಪತ್ರ ಸ್ವೀಕರಿಸಿದ ಬಳಿಕ ಮಾತನಾಡಿ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 13 ಸ್ಥಾನವಿದ್ದು ಅದರಲ್ಲಿ 10 ಮಂದಿ ಜೆಡಿಎಸ್ ಬೆಂಬಲಿತರು ಜಯಗಳಿಸಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ನಿಂತು ಮಾದರಿ ಗ್ರಾಮ ಪಂಚಾಯಿತಿ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕೋರೇಗಾಲ ನಾಗೇಂದ್ರ, ಚೈತ ಅಶ್ವಿನಿ, ಮಾಗನೂರು ಹೇಮಾವತಿ ವಸಂತ ಕುಮಾರ್, ಅವಿರೋಧ, ಚನ್ನಬಸವಣ್ಣ, ಬಸವನಪುರ ನಾಗರಾಜು, ಶೆಟ್ಟಿಹಳ್ಳಿ ಮನು ಸೇರಿದಂತೆ ಬಸವನಪುರ ಕರಿಯಪ್ಪ ಮತ್ತಿತ್ತರರು ಭಾಗಿಯಾಗಿದ್ದರು.

ವರದಿ- ಎ.ಎನ್ ಲೋಕೇಶ್ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version