ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಪ್ರಕಾಶ್ ಧಾರಿವಾಳ ಒಡೆತನದ ಇಂಡಿಯನ್ ಪೆಟ್ರೋಲಿಯಂ ಬಂಕ್ ಹಲವಾರು ದಿನಗಳಿಂದ ಗ್ರಾಹಕರಿಗೆ ಮೋಸ ಮಾಡುವುದು ನಡೆಯುತ್ತಲೇ ಇದೆ. ಇಂದು ಕೂಡ ಇದು ಸಾಭೀತಾಗಿದೆ. ಗ್ರಾಹಕರು ತಮ್ಮ ಟ್ರ್ಯಾಕ್ಟರ್ ಗೆ 2000 ರೂಗಳ ಡೀಸಲ್ ಹಾಕಿಸಿ ವಾಹನ ಅರ್ಧ ಕಿಲೋ ಮೀಟರ್ ಕೂಡ ಹೋಗದೆ ಬಂದ್ ಆಗಿದೆ, ಎಲ್ಲಾ ರೀತಿಯಿಂದ ತಪಾಸಣೆ ಮಾಡಿದಾಗ ಯಾವುದೇ ಎಂಜಿನ್ ದೋಷ ಕಂಡು ಬಂದಿಲ್ಲ, ಆಗ ಸಾರ್ವಜನಿಕರು ಡೀಸಲ್ ದೋಷ ಇರಬಹುದು ನೋಡಿ ಎಂದಾಗ ಹಾಕಿರುವ ಡೀಸಲ್ ತೆಗೆದು ಬಾಟಲಿನಲ್ಲಿ ಸಂಗ್ರಹಿಸಿದ ನೋಡಿದಾಗ ಅದರಲ್ಲೂ ನೀರು, ಗಾಬರಿಗೊಂಡು ಇಂಡಿಯನ್ ಪೆಟ್ರೋಲಿಯಂ ಬಂಕ್ ಗೆ ಬಂದು ವಿಚಾರಿಸಿದಾಗ ಮಾತಿನ ಚಕಮಕಿ ನಡೆದಿದೆ, ನಮ್ಮ ಮಾಲೀಕರು ಬರುವವರೆಗೂ ಕಾಯಿರಿ ಎಂದು ಹೇಳಿದಾಗ ಗದ್ದಲ ಕೋಲಾಹಲಕ್ಕೆ ಕಾರಣವಾಗಿದೆ. ಕೂಡಲೇ ಆಗಮಿಸಿದ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿ ,ಸೂಕ್ತ ತನಿಖೆ ಮಾಡುತ್ತೇವೆ ತಪ್ಪಿತಸ್ಥರ ವಿರುದ್ಧ ಕ್ರಮ ಕಾನೂನು ಕ್ರಮ ಕೈಗೊಳ್ಳಾಗುವುದೆಂದು ಹೇಳಿದ್ದಾರೆ.
ವರದಿ-ಬಾಬಾ ಎಕ್ಸ್ ಪ್ರೆಸ್ ಟಿವಿ ರಾಯಚೂರು