ಮಂಡ್ಯ

ಗ್ರಾಮ ಪಂಚಾಯಿತಿಯಲ್ಲಿ ಚುನಾಯಿತ 19 ಮಂದಿ ಸದಸ್ಯರು ಒಗ್ಗಟ್ಟಾಗಿ ಇರುತ್ತಾರೆ- ಸಿಪಿಐಎಂ ಮುಖಂಡ ಕೃಷ್ಣೇಗೌಡ..!

Published

on

ಮಳವಳ್ಳಿ: ಭ್ರಷ್ಟಾಚಾರ ವಿರುದ್ದ ಹೋರಾಟಕ್ಕೆ ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಯ ಬಗ್ಗೆ ನೀಡಿರುವ ಭರವಸೆಗೆ ತಳಗವಾದಿ ಗ್ರಾಮ ಪಂಚಾಯಿತಿಯಲ್ಲಿ ಚುನಾಯಿತ 19 ಮಂದಿ ಸದಸ್ಯರು ಒಗ್ಗಟ್ಟಾಗಿ ಇರುತ್ತಾರೆ ಎಂದು ಸಿಪಿಐಎಂ ಮುಖಂಡ ಕೃಷ್ಣೇಗೌಡ ತಿಳಿಸಿದರು.ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈಗ ಗೆದ್ದಿರುವ ಎಲ್ಲಾ 19 ಮಂದಿ ಗ್ರಾಮ ಪಂಚಾಯಿತಿ ಸದಸ್ಯರುಗಳು ವಿವಿದ ಪಕ್ಷದಲ್ಲಿದ್ದರೂ ಸಹ ಎಲ್ಲರೂ ಒಟ್ಟಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಪಡಿಸಲು ಚುನಾವಣೆ ಸಂಧರ್ಭದಲ್ಲಿ ಸಿಂಡಿಕೇಟ್ ಮಾಡಿಕೊಂಡು ಸ್ವರ್ಧಿಸಿದ್ದೆವು. ನಾವು ಗ್ರಾಮಪಂಚಾಯಿತಿ ವಿಷಯದಲ್ಲಿ ಮಾತ್ರ ಸಿಂಡಿಕೇಟ್ ಆಗಿಯೇ ಇದ್ದು ,ಪಕ್ಷಾತೀತವಾಗಿ ಭ್ರಷ್ಟಾಚಾರ ವಿರುದ್ದ ಹಾಗೂ ಗ್ರಾಮಪಂಚಾಯಿತಿ ಅಭಿವೃದ್ಧಿಗಾಗಿ ಒಟ್ಟಾಗಿ ಇರುತ್ತೇವೆ ಎಂದರು. ಯಾವುದೇ ಕಾರಣಕ್ಕೂ ನಾವು ಗ್ರಾಮ ಪಂಚಾಯಿತಿ ವಿಚಾರದಲ್ಲಿ ಪಕ್ಷ ಅಂತ ಗುರುತಿಸುವುದಿಲ್ಲ, ಎಂದು ಸ್ವಷ್ಟನೆ ನೀಡಿದರು.ಇನ್ನೂ ಸುದ್ದಿಗೋಷ್ಠಿಯಲ್ಲಿ ಕೃಷಿಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾಧು, ಜೆಡಿಎಸ್ ಹಿರಿಯ ಮುಖಂಡ ಚೌಡಪ್ಪ, ಚೌಡೇಗೌಡ, ಸೇರಿದಂತೆ ಗ್ರಾಮಪಂಚಾಯಿತಿ ನೂತನ ಸದಸ್ಯರು ಹಾಜರಿದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Click to comment

Trending

Exit mobile version