ತಿಪಟೂರು

ಅನ್ ಲೈನ್ ಜೂಜಾಟಕ್ಕೆ ಬಿದ್ದು ಬ್ಯಾಂಕಿನ ಹಣ ದುರುಪಯೋಗ- ವ್ಯವಸ್ಥಾಪಕ ಪರಾರಿ…!

Published

on

ತಿಪಟೂರು: ನಗರದ ಹೆಚ್.ಡಿ.ಎಫ್.ಸಿ ಬ್ಯಾಂಕಿನ ವ್ಯವಸ್ಥಾಪಕ ಸುಮಾರು 29 ಲಕ್ಷ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ೦ದು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಬ್ಯಾಂಕಿನ ವ್ಯವಸ್ಥಾಪಕ ಆನ್ಲೈನ್ ಜೂಜಾದ ರಮ್ಮಿ ಸರ್ಕಲ್ಗೆ ಬಿದ್ದು ಬ್ಯಾಂಕಿನ ಹಣ ದುರುಪಯೋಗ ಪಡಿಸಿಕೊಂಡು ಈಗ ಊರು ಬಿಟ್ಟಿದ್ದಾನೆಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೆಚ್.ಡಿಎಫ್.ಸಿ ಬ್ಯಾಂಕಿನಲ್ಲಿ ವ್ಯವಹಾರ ಮಾಡುತ್ತಿದ್ದ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಚಿಕ್ಕಬಿದರೆಯ ಶಾಂತಕುಮಾರ್ ಬಿನ್ ಚಂದ್ರಣ್ಣ ಎಂಬಾತನು ಸಾಲದ ಬಾಬ್ತು ಜಮೆ ಮಾಡುವಂತೆ ಡಿಸೆಂಬರ್ 22ರಂದು 29 ಲಕ್ಷ ರೂಪಾಯಿಗಳನ್ನು ಬ್ಯಾಂಕ್ನ ವ್ಯವಸ್ಥಾಪಕರಿಗೆ ಕೊಟ್ಟಿರುತ್ತಾರೆ. ಆದರೆ ಡಿಸೆಂಬರ್ 24 ಆದರೂ ಖಾತೆಗೆ ಹಣ ವರ್ಗಾವಣೆಯಾಗದ ಬಗ್ಗೆ ಇಲ್ಲಸಲ್ಲದ ಕಾರಣ ಹೇಳಿದ ಮ್ಯಾನೇಜರ್ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಡಿಸೆಂಬರ್ 24ರಂದು ದೂರು ನೀಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಬ್ಯಾಂಕಿನ ಅನೇಕ ಗ್ರಾಹಕರು ಠಾಣೆ ಮುಂದೆ ಜಮಾಯಿಸಿದ್ದು ತಮಗೂ ಇದೇ ರೀತಿಯಾಗಿದೆ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ನಗರ ಪೋಲೀಸ್ ಠಾಣೆಯಲ್ಲಿ ಐ.ಪಿ.ಸಿ 420 ಖಾಯ್ದೆಯಡಿ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.

ವರದಿ-ಸಿದ್ಧೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Click to comment

Trending

Exit mobile version