Uncategorized

ಗ್ರಾಮೀಣ ಅಭಿವೃದ್ದಿಗೆ ಗ್ರಾ.ಪಂ ಸದಸ್ಯರ ಪಾತ್ರ ಬಹುಮುಖ್ಯ-ಡಾ.ಜಿ ಪರಮೇಶ್ವರ್..!

Published

on

ಕೊರಟಗೆರೆ: ಹಗಲುರಾತ್ರಿ ಎನ್ನದೇ ಮಳೆ-ಚಳಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ಸಾವಿರಾರು ರೈತರು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ.ಬಡಜನತೆ ಮತ್ತು ರೈತಾಪಿವರ್ಗದ ಪರವಾಗಿ ಕೆಲಸ ಮಾಡಬೇಕಾದ ನೀವು ಯಾರ ಪರವಾಗಿದ್ದೀರಾ ಹೇಳಿ, ಕಾರ್ಪೋರೆಟ್ ಕಂಪನಿ ಮತ್ತು ಶ್ರೀಮಂತರ ಪರವಾಗಿ ಮಾತ್ರ ನಿಮ್ಮ ಸರಕಾರ ಕೆಲಸ ಮಾಡುತ್ತಾ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು.ಕೊರಟಗೆರೆ ವಿಧಾನಸಭಾ ಕ್ಷೇತ್ರದ ಹೊಳವನಹಳ್ಳಿ, ಚನ್ನರಾಯನದುರ್ಗ, ಕೋಳಾಲ, ಕಸಬಾ, ಪುರವಾರ ಮತ್ತು ಕೋರಾ ಹೋಬಳಿಯ 36 ಗ್ರಾಪಂ ವ್ಯಾಪ್ತಿಯ 425 ಕ್ಕೂ ಅಧಿಕ ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ ಸದಸ್ಯರಿಗೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಿನ್ನೆ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ರಾಜ್ಯ ಸರಕಾರದ ಹಣಕಾಸಿನ ಸ್ಥಿಗಿಗತಿಯ ಬಗ್ಗೆ ರಾಜ್ಯದ ಜನರಿಗೆ ತಿಳಿಸಿ ಮಾನ್ಯ ಮುಖ್ಯಮಂತ್ರಿಗಳೇ.ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಬಿಡುಗಡೆಯಾದ 200 ಕೋಟಿ ಅನುಧಾನ ಹಿಂದಕ್ಕೆ ಪಡೆಯುವ ರಾಜಕೀಯ ಹುನ್ನಾರವೇಕೆ, ಪ್ರವಾಹದಿಂದ ಜನರ ಪಾಡು ಹೇಳತೀರದಾಗಿದೆ. 5ರೂ ಬೆಲೆಯ ಮಾಸ್ಕ್ಗೆ 150ರೂ ಮತ್ತು 5 ಲಕ್ಷದ ಪಿಪಿಇ ಕಿಟ್ಗೆ 30 ಲಕ್ಷ ಬಿಲ್ ಮಾಡಿ ಕೊರೊನಾ ಹೆಸರಿನಲ್ಲಿ ಲೂಟಿ ಮಾಡಿದ್ದೀರಾ ಎಂದು ಆರೋಪ ಮಾಡಿದರು.ಇನ್ನೂ ನಂತರ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಗ್ರಾಪಂ, ತಾಪಂ ಮತ್ತು ಜಿಪಂ ಸದಸ್ಯರಿಗೆ ಸಂವಿಧಾನಿಕ ಸ್ಥಾನಮಾನ ನೀಡಿದ ಕೀರ್ತಿ ರಾಜೀವ್ ಗಾಂಧಿಗೆ ಸಲ್ಲುತ್ತದೆ. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ವಕ್ಷೇತ್ರವಾದ ಕೊರಟಗೆರೆಯ ಬಹುತೇಕ ಗ್ರಾ.ಪಂಗಳು ಕಾಂಗ್ರೆಸ್ ಪಕ್ಷದ ವಶವಾಗಿವೆ. ಗ್ರಾಪಂ ಚುನಾವಣೆಯಲ್ಲಿ ಯುವ ಉತ್ಸಾಹಿ ಯುವಕರ ಪಡೆ ಮತ್ತು ಮಹಿಳಾ ವರ್ಗಕ್ಕೆ ಜನರ ಆಶಿರ್ವಾದ ಆಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಸದಸ್ಯರ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.ಇನ್ನೂ ಈ ಕಾರ್ಯಕ್ರಮದಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ, ಪಾವಗಡ ಶಾಸಕ ವೆಂಕಟರವಣಪ್ಪ,ತಿಪಟೂರು ಮಾಜಿ ಶಾಸಕ ಷಡಾಕ್ಷರಿ, ತುಮಕೂರು ನಗರ ಮಾಜಿ ಶಾಸಕ ರಪೀಕ್ ಅಹಮ್ಮದ್, ಷಪೀ ಅಹಮ್ಮದ್,ಎಂಎಲ್ಸಿ ರಮೇಶಬಾಬು, ಕೆಪಿಸಿಸಿ ಸದಸ್ಯ ವೆಂಕಟಾಚಲಯ್ಯ, ಕಾರ್ಯದರ್ಶಿ ದಿನೇಶ್, ಎಂಎನ್ಜೆ ಮಂಜುನಾಥ, ತಾಪಂ ಅಧ್ಯಕ್ಷ ಟಿ.ಸಿ.ರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಯುವಧ್ಯಕ್ಷ ವಿನಯ್,ಜಯಮ್ಮ,ಕವಿತಾ, ರಂಗಮ್ಮ ಸೇರಿದಂತೆ ಇತರರು ಇದ್ದರು.

ವರದಿ – ದೇವರಾಜ್ ಕೆ.ಎನ್. ಎಕ್ಸ್ ಪ್ರೆಸ್ ಟಿವಿ ಕೊರಟಗೆರೆ

Click to comment

Trending

Exit mobile version