Uncategorized

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ..!

Published

on

ಕವಿತಾಳ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ 9 ನೇ ವಾರ್ಡ್ ಸಮಸ್ಸೆಗಳ ಅಗರವಾಗಿದೆ. ಸಾರ್ವಜನಿಕರು ತಿರಗಾಡುವುದಕ್ಕೂ ಆಗದ ಪರಿಸ್ಥೀತಿ ಈ ವಾರ್ಡ್ ನಲ್ಲಿ ನಿರ್ಮಾಣವಾಗಿದೆ. ಕಾರಣ ಊರ ಮಧ್ಯೆ ಹಾಕಿರುವ ಕಸದ ರಾಶಿ,ದುರ್ವಾಸನೆ ಬಿರುವುದು ಒಂದು ಕಡೆಯಾದರೆ ಮೂಕ ಪ್ರಾಣಿಗಳ ರೋಧನೆ ಹೇಳತೀರದಾಗಿದೆ. ಹಲವು ಬಾರಿ ಇಲ್ಲಿರುವ ಧನಕರುಗಳು ಸೇರಿದಂತೆ ಮೂಕಪ್ರಾಣಿಗಳು ತಿಪ್ಪೆಯಲ್ಲಿ ಬಿದ್ದಿರುವ ಪ್ಲ್ಯಾಸ್ಟಿಕ್ ತಿಂದು ಅನಾರೋಗ್ಯಕ್ಕೆ ಈಡಾಗುತ್ತಿದ್ದು, ಚರಂಡಿಗಳಲ್ಲಿ ಕೊಳಚೆ ನೀರು ತುಂಬಿ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಹಲವಾರು ಭಯಾನಕ ರೋಗಗಳಿಗೆ ಆಹ್ವಾನಿಸುತ್ತಿವೆ.ಈ ವಿಷಯವಾಗಿ ಹಲವಾರು ಬಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ, ಇನ್ನು ಜನಪ್ರತಿನಿಧಿಗಳಂತು ಇದರ ಗೋಜಿಗೆ ಹೋಗುತ್ತಿಲ್ಲ. ಒಟ್ಟಾರೆ ಅಧಿಕಾರಿಗಳ ಜಾಣ ಕುರುಡುತನ ಪ್ರದರ್ಶನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೇತ್ತು ಕಸ ವಿಲೇವಾರಿ ಮಾಡುವ ಕೆಲಸಕ್ಕೆ ಮುಂದಾಗುತ್ತಾರಾ ಕಾದೂ ನೋಡಬೇಕಾಗಿದೆ.

ವರದಿ-ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ

Click to comment

Trending

Exit mobile version