ಹುಬ್ಬಳ್ಳಿ-ಧಾರವಾಡ

ಜನವರಿ 25-27 ಕ್ಕೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸಾಂಸ್ಕ್ರತಿಕ ಉತ್ಸವ- ಬಸವರಾಜ ದೇವರು..!

Published

on

ಹುಬ್ಬಳ್ಳಿ: ಧಾರವಾಡದ ಮನಸೂರ ಕನಕ ಕಲಾ ಸಾಂಸ್ಕೃತಿಕ ಕೇಂದ್ರ(ರಿ) ಸುಕ್ಷೇತ್ರ ಜಗದ್ಗುರು ಶ್ರೀ ರೇವಣಸಿದ್ದ ಮಹಾಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಇದೇ 25 ರಿಂದ 27 ಭಾನುವಾರದವರೆಗೆ ರಾಷ್ಟ್ರವೀರ ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಉತ್ಸವವನ್ನು ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ ದೇವರು ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಮಹಾದ್ವಾರಕ್ಕೆ ರಾಷ್ಟ್ರವೀರ ಸಂಗೊಳ್ಳಿ ರಾಯಣ್ಣ ಹೆಸರಿಸಲಾಗುವುದು.ಪ್ರಧಾನ ವೇದಿಕೆಗೆ ವೀರಪಾಂಡೆ ಕಟ್ಟಿ ಬೊಮ್ಮಣ್ಣ ಹೆಸರಿಡಲಾಗುವುದು. 25ರಂದು ನಡೆಯುವ ಕಾರ್ಯಕ್ರಮದಲ್ಲಿ ರಾಯಣ್ಣ ಜ್ಯೋತಿ ಪ್ರಜ್ವಲನೆ ಜ್ಯೋತಿ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿದ್ದು,ಜನವರಿ 26ರಂದು ರಾಜ್ಯಮಟ್ಟದ ಸಂಗೊಳ್ಳಿ ರಾಯಣ್ಣ ಬದುಕು ಹೋರಾಟ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿದೆ ಎಂದರು. ಇನ್ನೂ ಕಾರ್ಯಕ್ರಮದ ಸಾನಿಧ್ಯವನ್ನು ಬಸವರಾಜ ದೇವರು ವಹಿಸಲಿದ್ದು, ಕಾರ್ಯಕ್ರಮ ಉದ್ಘಾಟನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ.ಎಂ.ಎನ್.ನಂದೀಶ್ ಹಂಜೆ ನೆರವೇರಿಸಲಿದ್ದಾರೆ.ಕಾರ್ಯಕ್ರಮ ಅಧ್ಯಕ್ಷತೆಯನ್ನು ಡಾ.ಎಫ್.ಡಿ.ಹಳ್ಳಿಕೇರಿ ವಹಿಸಲಿದ್ದು,ರಾಜ್ಯದ ವಿವಿಧ ಮೂಲೆಗಳಿಂದ ಅತಿಥಿಗಳು ಉಪನ್ಯಾಸಕರು ಹಾಗೂ ಸಾಹಿತಿಗಳು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

ವರದಿ- ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Click to comment

Trending

Exit mobile version