ಚಿಕ್ಕಬಳ್ಳಾಪುರ

ಕಾಡಿನಲ್ಲಿ ಐದು ಸಾವಿರಕ್ಕೂ ಅಧಿಕ ಕೋಳಿ ಮರಿಗಳು ಪತ್ತೆ..!

Published

on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊರ ವಲಯದಲ್ಲಿ ಇರುವ ಕಣಿತಹಳ್ಳಿ ಬಳಿಯಿರುವ ಮೀಸಲು ಅರಣ್ಯದಲ್ಲಿ ಸರಿ ಸುಮಾರು ಐದು ಸಾವಿರ ನವಜಾತ ಫಾರಂ ಕೋಳಿ ಮರಿಗಳನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಕಾಡಿನಲ್ಲಿ ತಂದು ಬಿಟ್ಟಿದ್ದಾರೆ.ಇಂದು ಮುಂಜಾನೆ ಕಣಿತಹಳ್ಳಿ ಸುತ್ತ ಮುತ್ತಲಿನ ಗ್ರಾಮಸ್ಥರು ಕೋಳಿ ಮರಿಗಳನ್ನು ಕಂಡು ದಿಭ್ರಮೆಗೆ ಒಳಗಾಗಿದ್ದಾರೆ. ಹಕ್ಕಿ ಜ್ವರದ ಭೀತಿಯ ಹಿನ್ನಲೆ ಆಂಧ್ರಪ್ರದೇಶದ ಅಥವಾ ತಮಿಳುನಾಡು ಭಾಗದಿಂದ ಯಾರೋ ಈ ಕೋಳಿ ಮರಿಗಳನ್ನು ರಾತ್ರೋರಾತ್ರಿ ತಂದು ಕಾಡಿನಲ್ಲಿ ಬಿಟ್ಟಿರುವ ಶಂಕೆ ಇರುವುದರಿಂದ ಇಲ್ಲಿಯ ಕಣಿತಹಳ್ಳಿಯ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.

ವರದಿ-ಶ್ರೀನಿವಾಸ್ ಎಕ್ಸ್ ಪ್ರೆಸ್ ಟಿವಿ ಚಿಕ್ಕಬಳ್ಳಾಪುರ

Click to comment

Trending

Exit mobile version