ಬಾಗಲಕೋಟೆ

ಚಾಲುಕ್ಯ ನಾಡಲ್ಲಿ ಕೋವಿಡ್ ಲಸಿಕೆ ಡ್ರೈರನ್…!

Published

on

ಬಾಗಲಕೋಟೆ: ರಾಜ್ಯದಲ್ಲಿ ಕೋವಿಡ್ ಲಸಿಕೆ ಡ್ರೈ ರನ್ ಪ್ರಾರಂಭ ಮಾಡಿದ್ದು,ಅದರಂತೆ ಬಾದಾಮಿಯಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ಡ್ರೈ ರನ್ ಪ್ರಾರಂಭ ಮಾಡಲಾಗಿದೆ. ದೇಶದಲ್ಲಿ ಕಳೆದ ಸುಮಾರು ಹತ್ತು ತಿಂಗಳವರಗೆ ಕೋವಿಡ್ ನಿಂದ ಜನರು ತತ್ತರಿಸಿ ಹೋಗಿದ್ದರು. ಅಂತು ಕೇಂದ್ರ ಸರಕಾರ ಕೋವಿಡ್ ಲಸಿಕೆ ಕಂಡು ಹಿಡದಿದ್ದು.ಇದನ್ನು ಇದೇ ತಿಂಗಳು ನೀಡಲು ಸಕಲ ಸಿದ್ಧತೆ ಕಾರ್ಯ ನಡೆದಿದೆ. ಅದರಂತೆ ರಾಜ್ಯದಲ್ಲಿ ಕೋವಿಡ್ ಲಸಿಕೆ ಡ್ರೈ ರನ್ ನಡೆಸುತ್ತಿದ್ದು, ಪ್ರಸ್ತುತ ಚಾಲುಕ್ಯರ ನಾಡದ ಬಾದಾಮಿ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಸಲುವಾಗಿ 3 ಪ್ರತ್ಯೇಕ ಕೋಣೆ ಮೀಸಲು ಇಡಲಾಗಿದೆ.ಒಂದು ವೇಟಿಂಗ್ ರೂಮ್, ಕೋವಿಡ್ ವ್ಯಾಕ್ಷಿನ್ ರೂಮ್,ಮತ್ತೊಂದು ಅಬಸರ್ವೇಷನ್ ರೂಮ್ ತೆರೆಯಲಾಗಿದೆ.ನಿನ್ನೇ ತಾಲೂಕು ವೈದ್ಯಧಿಕಾರಿಗಳಾದ ಡಾ.ಪಾಟೀಲ್ ಇವರು ಸಹ ಸಿಬ್ಬಂದಿಗಳಿಗೆ ಯಾವ ರೀತಿಯಾಗಿ ಕೋವಿಡ್ ಲಸಿಕೆ ನೀಡಬೇಕು ಹಾಗೂ ಯಾವ ಮುಂಜಾಗ್ರತೆ ಕ್ರಮ ಕೈಕೊಳ್ಳಬೇಕು ಎಂಬ ಹಲವಾರು ವಿಚಾರ ಬಗ್ಗೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.ಇನ್ನೂ ಈ ಸಂದರ್ಭದಲ್ಲಿ ನಂದಿಕೇಶ್ವರ ಗ್ರಾಮದ ಮುಖ್ಯ ವೈದ್ಯರಾದ ಡಾ.ಭಂಡಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ-ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Click to comment

Trending

Exit mobile version