Uncategorized

ಗದಗ ಬ್ರೇಕಿಂಗ್ BIG IMPACT…… ವೃದ್ಧೆಯ ಕತ್ತಲ ಬದುಕಿಗೆ ಬೆಳಕಾದ ಎಕ್ಸ್ ಪ್ರೆಸ್ ಟಿವಿ

Published

on

ಗದಗ: ಗದಗ ತಾಲೂಕಿನ ಕಲ್ಲೂರು ಗ್ರಾಮದ ವೃದ್ಧೆ ಯಲ್ಲಮ್ಮ ಪಾಟೀಲ್ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಎಕ್ಸ್ ಪ್ರೆಸ್ ಟಿವಿ ಪ್ರಸಾರ ಮಾಡಿದ್ದ ವರದಿ ಫಲಶೃತಿಗೊಂಡಿದೆ.

ಸದ್ಯ ಕಳೆದ ೨೦ ವರ್ಷಗಳಿಂದ ಸೂರು ಇಲ್ಲದೆ ವೃದ್ಧೆ ಯಲ್ಲಮ್ಮ ಪಾಟೀಲ್ ಕಣ್ಣೀರಲ್ಲಿ ಕೈ ತೊಳೆಯುವಂತಾಗಿತ್ತು, ಇದರ ಹಿನ್ನೆಲೆಯಲ್ಲಿ ಇದರ ಬಗ್ಗೆ ಎಕ್ಸ್ ಪ್ರೆಸ್ ಟಿವಿ ವಿಸ್ತೃತವಾದ ವರದಿ ಪ್ರಸಾರ ಮಾಡಿತ್ತು.

ಹೀಗಾಗಿ ಈ ವರದಿಯಿಂದ ತಕ್ಷಣ ಎಚ್ಚೆತ್ತುಕೊಂಡ ಗದಗದ ಏಕಲವ್ಯ ಟ್ರಸ್ಟ್ , ಜಿಲ್ಲಾ ಪಂಚಾಯತ್ ಅಧಿಕಾರಗಳು ಹಾಗೂ ಧರ್ಮಸ್ಥಳ ಸಂಘ ಮತ್ತು ಇದೇ ಗ್ರಾಮದ ಚಂದ್ರಶೇಖರ ಹರಿಜನ ಹಾಗೂ ಸ್ನೇಹಿತರು ವೃದ್ಧೆ ಯಲ್ಲಮ್ಮಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಅAದ ಹಾಗೇ ಅಜ್ಜಿಗೆ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಮನೆ ನಿರ್ಮಾಣ ಮಾಡಲು ಚಂದ್ರಶೇಖರ ಹರಿಜನ ಮತ್ತವರ ಯುವ ಪಡೆ ಪಣ ತೊಟ್ಟರೇ, ಜಿಲ್ಲಾ ಪಂಚಾಯತ್ ಅಧಿಕಾರಿಗಳೂ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆ ಅಡಿಯಲ್ಲಿ ಮನೆ ಮಂಜೂರು ಭರವಸೆ ನೀಡಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಸಿ.ಆರ್.ಮುಂಡರಗಿ, ತಹಶೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ ಪರಿಶೀಲನೆ ನಡೆಸಿದ್ರು..ಈ ವೇಳೆ ವೃದ್ಧೆ ಯಲ್ಲಮ್ಮ ಪಾಟೀಲ್ ಸಮಸ್ಯೆ ಆಲಿಸಿದ ಅಧಿಕಾರಿಗಳು ಮನೆ ಮಂಜೂರು ಮಾಡುವಂತೆ ಪಿಡಿಒಗೆ ಸೂಚನೆ ನೀಡಿದ್ದಾರೆ.

ಇದೇ ವೇಳೆ ವೃದ್ಧೆ ಯಲ್ಲಮ್ಮ ಪಾಟೀಲ್‌ಗೆ ಸುಮಾರು ಐದು ತಿಂಗಳಿಗೆ ಆಗುವಷ್ಟು ಆಹಾರ ಧಾನ್ಯಗಳ ಕಿಟ್ ಕೂಡ ವಿತರಣೆ ಮಾಡಲಾಗಿದೆ.

ಒಟ್ಟಾರೆ ಕತ್ತಲ ಬದುಕಿನಲ್ಲಿ ಜೀವನ ನಡೆಸುತ್ತಿದ್ದ ತನ್ನ ಬಾಳಿಗೆ ಬೆಳಕಾದ ಎಕ್ಸ್ ಪ್ರೆಸ್ ಟಿವಿಗೆ ವೃದ್ಧೆ ಯಲ್ಲಮ್ಮ ಹಾಗೂ ಸ್ಥಳೀಯರು ಧನ್ಯವಾದ ಅರ್ಪಿಸಿದ್ದಾರೆ.

 

ರಾಕೇಶ್ ಎಕ್ಸ್ ಪ್ರೆಸ್ ಟಿವಿ ಗದಗ

 

Click to comment

Trending

Exit mobile version