ಗಣರಾಜ್ಯೋತ್ಸವಕ್ಕೆ ಟೀಂ ಇಂಡಿಯಾ ಗಿಫ್ಟ್ – ಕಿವೀಸ್ ವಿರುದ್ಧ ಭರ್ಜರಿ ಗೆಲುವು

ಮೌಂಟ್ ಮೌಂಗಾನೆ :  ಮೊದಲ ಏಕದಿನ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ನೀಡಿ ಜಯ ಪಡೆದಿದ್ದ ಟೀಂ ಇಂಡಿಯಾ,
ಇದೀಗ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅಮೋಘ ಪ್ರದರ್ಶನ ತೋರಿದು 90 ರನ್ ಅಂತರದಲ್ಲಿ ಭರ್ಜರಿ ಗೆಲುವು ಪಡೆದುಕೊಂಡಿದೆ. ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು 325 ರನ್ ಗಳ ಬೃಹತ್ ಮೊತ್ತವನ್ನು ನೀಡಿ ಕೇವಲ 234 ರನ್ ಗಳಿಗೆ ಕಿವೀಸ್ ತಂಡವನ್ನು ಆಲೌಟ್ ಮಾಡುವ ಮೂಲಕ 5 ಪಂದ್ಯಗಳ ಟೂರ್ನಿಯಲ್ಲಿ 2-0 ಮುನ್ನಡೆ ಪಡೆದಿದ್ದಾರೆ.
ಇನ್ನೂ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಟೀಂ ಇಂಡಿಯಾ ನಾಯಕ ಕೊಹ್ಲಿ ನಿರ್ಧಾರವನ್ನು
ಸಮರ್ಥಿಸುವಂತೆ ಆರಂಭಿಕರು ಬ್ಯಾಟ್ ಬೀಸಿದರು. ಆರಂಭಿಕರಾದ ರೋಹಿತ್ ಶರ್ಮಾ 87 (96 ಎಸೆತ, 9 ಬೌಂಡರಿ, 3 ಸಿಕ್ಸರ್) ರನ್ ಸಿಡಿಸಿ ವೃತ್ತಿ ಜೀವನದ 38ನೇ ಅರ್ಧ ಶತಕ ಪೂರೈಸಿದರೆ, ಶಿಖರ್ ಧವನ್‍ರ 66 ರನ್ (67 ಎಸೆತ, 9 ಬೌಂಡರಿ) 27 ನೇ ಅರ್ಧ ಶತಕ ಸಿಡಿಸಿ ಭಾರತ ಬೃಹತ್ ಮೊತ್ತ ಗಳಿಸಲು ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‍ಗೆ ಈ ಇಬ್ಬರ ಜೋಡಿ ಬರೋಬ್ಬರಿ 154 ರನ್ ಗಳ ಜೊತೆಯಾಟ ನೀಡಿತ್ತು. ಇತ್ತ ಪಂದ್ಯದಲ್ಲಿ ಮತ್ತೆ ಅರ್ಧ ಶತಕ ವಂಚಿತರಾದ ನಾಯಕ ಕೊಹ್ಲಿ 45 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 42 ರನ್ ಸಿಡಿಸಿದರು. ಕೊಹ್ಲಿಗೆ ಸಾಥ್ ನೀಡಿದ ರಾಯುಡು 49 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 47 ರನ್ ಗಳಿಸಿ ಅರ್ಧ ಶತಕ ಅಂಚಿನಲ್ಲಿ ಎಡವಿದರು.

Please follow and like us:

Related posts

Leave a Comment