ಸೋನುಸೂದ್ ಮೇಲೆ ಕೇಸ್ ಹಾಕಿದ ಮುಂಬೈ ಪಾಲಿಕೆ.!

ಮುಂಬೈ: ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡಿ ರಿಯಲ್ ಹೀರೋ ಎನಿಸಿಕೊಂಡವರು ಬಾಲಿವುಡ್ ನಟ ಸೋನುಸೂದ್. ಆದರೆ ಅವರು ಕಾನೂನು ಪ್ರಕಾರ ನಡೆದು ಕೊಂಡಿಲ್ಲ ಎಂದು ಆರೋಪಿಸಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕೇಸ್ ಹಾಕಿದ್ದಾರೆ. ಅದಕ್ಕೀಗ ಸೋನು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಸೋನು ಮುಂಬೈನಲ್ಲಿ ಕೆಲವು ಹೋಟೆಲ್ಗಳನ್ನು ಹೊಂದಿದ್ದಾರೆ. ಜುಹೂ ಪ್ರದೇಶದಲ್ಲಿ ಇರುವ ಜನವಸತಿ ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡು ಹೋಟೆಲ್ ಆರಂಭಿಸಿದ್ದಾರೆ ಎಂದು ಸೋನು ಮೇಲೆ ಆರೋಪ ಎದುರಾಗಿದೆ. ಈ ಕಟ್ಟಡವು ಆರು ಮಹಡಿ ಹೊಂದಿದೆ. ಆದರೆ ಈ ಆರೋಪವನ್ನು ಸೋನು ಸೂದ್ ತಳ್ಳಿ ಹಾಕಿದ್ದು, ಈ ಹೋಟೆಲ್ ಆರಂಭಿಸಲು ತಾವು ಅಗತ್ಯವಿರುವ ಎಲ್ಲ ಇಲಾಖೆಗಳ ಅನುಮತಿಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಈ ಆರೋಪವನ್ನು ಸೋನು ಸೂದ್ ತಳ್ಳಿ ಹಾಕಿದ್ದಾರೆ. ಈ ಹೋಟೆಲ್ ಆರಂಭಿಸಲು ತಾವು ಅಗತ್ಯವಿರುವ ಎಲ್ಲ ಇಲಾಖೆಗಳ ಅನುಮತಿಯನ್ನು ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು .

Please follow and like us:

Related posts

Leave a Comment