ಕೊರೊನಾ ಸೋಂಕಿತ ಕುಟುಂಬಗಳಿಗೆ ಔಷಧಿ ಕಿಟ್ ಹಸ್ತಾಂತರ..

ಮೈಸೂರು(ಪಿರಿಯಾಪಟ್ಟಣ):ಗ್ರಾಮಾAತರ ಪ್ರದೇಶದ ಕೊರೊನಾ ಸೋಂಕಿತ ವ್ಯಕ್ತಿ ಹಾಗೂ ಅವರ ಕುಟುಂಬಗಳಿಗೆ  ಔಷಧಿ ಕಿಟ್ ವಿತರಿಸಿ ಆತ್ಮಸ್ಥೈರ್ಯ ತುಂಬಲು ಗ್ರಾಮ ಪಂಚಾಯಿತಿವಾರು ತೆರಳುತ್ತಿದ್ದೇನೆ ಎಂದು ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ತಿಳಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಪುರಸಭಾ ಕಚೇರಿಯಲ್ಲಿ ಸಾರ್ವಜನಿಕರಿಗೆ ವಿತರಿಸಲು ಪುರಸಭಾ ಸಾಮಾನ್ಯ ನಿಧಿಯಿಂದ ಸುಮಾರು ೩ ಲಕ್ಷ ರೂಪಾಯಿ ವೆಚ್ಚದ ಔಷಧಿ ಕಿಟ್‌ಗಳನ್ನು ತಾಲೂಕು ಆಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಕಾಲದಲ್ಲಿ ಪಕ್ಷಭೇದ ಮರೆತು ರಾಜಕೀಯ ಮಾಡದೆ ಈ ಕೆಲಸ ನಿರ್ವಹಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇನ್ನು ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ಮಾತನಾಡಿ,ಕೊರೊನಾ ರೋಗವನ್ನು ನಿರ್ಮೂಲ ಮಾಡಲು ಸರ್ಕಾರದ ಜೊತೆ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.

ಇದೇ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್ ಮಾತನಾಡಿ, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರು ಪಂಚ ಸೂತ್ರಗಳನ್ನು ಪಾಲಿಸಿದರೆ ಯಾವುದೇ ರೋಗ ಬಾಧಿಸುವುದಿಲ್ಲ ಆ ನಿಟ್ಟಿನಲ್ಲಿ ಪುರಸಭೆಯ ಸದಸ್ಯರು ರೋಗ ನಿರ್ಮೂಲ ಮಾಡಲು ಹೆಚ್ಚು ಗಮನಹರಿಸಬೇಕು ಎಂದರು.

ತಾಲೂಕು ಆರೋಗ್ಯಧಿಕಾರಿ ಡಾ ಶರತ್ ಬಾಬು ಮಾತನಾಡಿ,ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳು ಹಾಗೂ ಪ್ರಾಥಮಿಕ  ಸಂಪರ್ಕದಲ್ಲಿ ಇದ್ದ ರೋಗಿಗಳಿಗೆ ಆರೋಗ್ಯ ಇಲಾಖೆ ಸೂಚಿಸಿದ ಮಾತ್ರೆಗಳನ್ನು ನೀಡಬೇಕು.ಈಗಾಗಲೇ ಸುತ್ತೋಲೆಯನ್ನು ಹೊರಡಿಸಲಾಗಿದೆ.ಸುತ್ತೋಲೆ ಉಲ್ಲಂಘಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಚ್ಚರಿಕೆ ನೀಡಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ತಾಲೂಕು ದಂಡಾಧಿಕಾರಿ ಚಂದ್ರಮೌಳಿ, ಪುರಸಭಾ ಮುಖ್ಯಾಧಿಕಾರಿ ಪ್ರಸನ್ನಕುಮಾರ್, ಪುರಸಭೆ ಸದಸ್ಯರುಗಳು ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

 

ರಾಮೇಗೌಡ ಎಕ್ಸ್ ಪ್ರೆಸ್ ಟಿವಿ (ಪಿರಿಯಾಪಟ್ಟಣ) ಮೈಸೂರು

Please follow and like us:

Related posts

Leave a Comment