ಗದಗದಲ್ಲಿ ಡಿಎಪಿ ರಸಗೊಬ್ಬರಕ್ಕಾಗಿ ರೈತರ ಪರದಾಟ…

ಗದಗ: ಗದಗ ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರಕ್ಕಾಗಿ ರೈತರು ಪರದಾಟ ಆರಂಭಿಸಿದ್ದಾರೆ.

ಸದ್ಯ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಿತ್ತನೆ ಮಾಡಲು ಡಿಎಪಿ ರಸಗೊಬ್ಬರ ಅವಶ್ಯಕವಾಗಿರುವ ಹಿನ್ನೆಲೆಯಲ್ಲಿ ಈ ಗೊಬ್ಬರಕ್ಕಾಗಿ ರೈತರು ಪರದಾಟ ನಡೆಸುತ್ತಿದ್ದಾರೆ.

ಇನ್ನು ಡಿಎಪಿ ರಸಗೊಬ್ಬರ ಇದ್ದರು ಅದನ್ನು ಕೊಡುವುದಕ್ಕೆ ಅಂಗಡಿ ಮಾಲೀಕರು ನಿರಾಕರಿಸುತ್ತಿದ್ದಾರೆ. ಅಲ್ಲದೆ, ೧೦ ಗಂಟೆ ನಂತರ ಬನ್ನಿ ಗೊಬ್ಬರ ನೀಡುತ್ತೇವೆ ಎಂಬ ಸಬೂಬು ಹೇಳುತ್ತಿದ್ದಾರೆ ಅಂತ ಗದಗ ತಾಲೂಕಿನ ಹರ್ತಿ ಗ್ರಾಮದ ರೈತರು ಆಕ್ರೋಶ ವ್ತಕ್ತಪಡಿಸಿದ್ದಾರೆ.

ಇದರ ಜೊತೆಗೆ ತಾಂತ್ರಿಕ ಕಾರಣದಿಂದ ಬಯೋಮೆಟ್ರಿಕ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಗೊಬ್ಬರ ಖರೀದಿಗೆ ಬಂದ ರೈತರು ಖಾಲಿ ಕೈಯಲ್ಲಿ ವಾಪಸ್ ತೆರಳುವಂತಾಗಿದೆ.

ರಾಕೇಶ್ ಎಕ್ಸ್ ಪ್ರೆಸ್ ಟಿವಿ ಗದಗ

Please follow and like us:

Related posts

Leave a Comment