`ಎಲ್ಲರೂ ಗಿಡ ನೆಟ್ಟು ಪೋಷಣೆ ಮಾಡಿ’

ಹಾಸನ (ಅರಸೀಕೆರೆ):ಅರಸೀಕೆರೆ ತಾಲೂಕಿನಾದ್ಯಂತ ಒಂದು ವರ್ಷಗಳಿಂದ ಪರಿಸರ ಪ್ರೇಮಿ ವಿಜಯ್ ಕುಮಾರ್ ಗಿಡ ನೆಟ್ಟು ಪೋಷಣೆ ಮಾಡುತ್ತಾ ಬಂದಿದ್ದಾರೆ.

ಸದ್ಯ ಇಂದು ಪರಿಸರ ದಿನಾಚರಣೆ ಅಂಗವಾಗಿ ಮತ್ತೊಂದು ಸಸಿ ನೆಟ್ಟು ಸುಮಾರು ಇಲ್ಲಿಯವರೆಗೂ ೨ ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನು ಈ ಗಿಡ ನೆಡುವ ಕಾರ್ಯಕ್ರಮದಲ್ಲಿ ಹಾಜರಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ವಿ.ಟಿ.ಬಸವರಾಜ್ ಮಾತನಾಡಿ, ಗಿಡಮರಗಳಿಂದ ನಮ್ಮ ಪರಿಸರ ತಂಪಾಗಿರುತ್ತದೆ.ಮರಗಳು ಬಿಡುವ ಆಮ್ಲಜನಕದಿಂದ ಜನಸಾಮಾನ್ಯರಿಗೆ ಒಳ್ಳೆಯ ಗಾಳಿ ಸಿಗುತ್ತದೆ.ಈಗಾಗಲೇ ಆಕ್ಸಿಜನ್ ಗೋಸ್ಕರ ಜನರು ಪರದಾಡುವ ಪರಿಸ್ಥಿತಿ ಬಂದಿದೆ.ಗಿಡಮರಗಳು ಬೆಳೆದರೆ ನಮಗೆ ನಮ್ಮ  ಪರಿಸರಕ್ಕೆ ಒಳ್ಳೆಯದು ಎಂದರಲ್ಲದೆ, ಇಂದು ಪರಿಸರ ದಿನಾಚರಣೆ ಅಂಗವಾಗಿ ಮನೆಗೊಂದು ಮರ, ಊರಿಗೊಂದು ವನ ಎಂಬAತೆ ಎಲ್ಲರೂ ಗಿಡ ನೆಟ್ಟು ಪೋಷಣೆ ಮಾಡಿ ಎಂದು ಕರೆ ನೀಡಿದರು.

ಇದೇ ವೇಳೆ ಕಾರ್ಯಕ್ರಮದಲ್ಲಿ ಅವಿನಾಶ್ ನಾಯ್ಡು, ಲಾಳನಕೆರೆ ಯೋಗೀಶ್, ಶಶಿ ಯಾದವ್, ಉಮಾ ಕುಮಾರ್, ಸುಧಾ, ಸಿಂಧು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಜೀವನ್ ಕುಮಾರ್ ಎಕ್ಸ್ ಪ್ರೆಸ್ ಟಿವಿ (ಅರಸೀಕೆರೆ) ಹಾಸನ

Please follow and like us:

Related posts

Leave a Comment