ಶ್ರೀ ಶಿವಲಿಂಗೇಶ್ವರ ಮಹಾ ರಥೋತ್ಸವ ರದ್ದು..

ಆಳಂದ(ಕಲಬುರಗಿ):ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸುಕ್ಷೇತ್ರ ಮಾದನಹಿಪ್ಪರಗಿಯ ಶ್ರೀ ಶಿವಲಿಂಗೇಶ್ವರ ಮಹಾ ರಥೋತ್ಸವವನ್ನು ರದ್ದು ಮಾಡಲಾಗಿದೆ.
ಇದೆ ಮೇ.೭ರಂದು ಆಗಿ ಹುಣ್ಣಿಮೆ ಯಂದು ರಥೋತ್ಸವ ನಡೆಯಬೇಕಾಗಿತ್ತು.ಆದರೆ ಕೊರೊನಾದಿಂದ ಇಡಿ ದೇಶದ ಜನತೆ ಸಂಕಟ ಎದುರಿಸುತ್ತಿದ್ದಾರೆ.ಯಾವುದೇ ಜಾತ್ರೆ ರಥೋತ್ಸವಗಳನ್ನು ಮಾಡದಂತೆ ಸರಕಾರ ಸೂಚನೆ ನೀಡಿದೆ.ಹೀಗಾಗಿ ಸಾವಿರಾರು ಜನರು ಸೇರುವ ಈ ರಥೋತ್ಸವವನ್ನು ರದ್ದು ಮಾಡಲಾಗಿದೆ.
ಇನ್ನು ಮಠದ ಒಡೆಯರಾದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿ ಸರಕಾರದ ಆದೇಶ ಪಾಲನೆ ಮಾಡಬೇಕೆಂದು ಜಾತ್ರೆ ರದ್ದು ಪಡಿಸಿರುದಾಗಿ ತಿಳಿಸಿದರು.
ಅಲ್ಲದೆ, ಜಾತ್ರೆ ದಿನ ಯಾರು ಮನೆಯಿಂದ ಮಠದ ಕಡೆಗೆ ಬರದೆ ಮನೆಯಲ್ಲಿ ಜಾತ್ರೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ(ಕಲಬುರಗಿ)

Please follow and like us:

Related posts

Leave a Comment