ಕಲಬುರಗಿ : ಕೊರೊನಾ ಕಡಿಮೆಯಾದ ಹಿನ್ನಲೆಯಲ್ಲಿ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆ ವೈದ್ಯರು ಕೊರೊನಾ ರೋಗಿಗಳೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ..
ಅಂದ ಹಾಗೇ ವರನಟ ಡಾ.ರಾಜಕುಮಾರ್ ಅವರ ಸೂಪರ್ ಹಿಟ್ ಚಿತ್ರಗೀತೆ `ನಗುತ್ತಾ..ನಗುತ್ತಾ..ಬಾಳು ನೀನು ಎಂಬ ಹಾಡಿಗೆ’ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳು ಸಖತ್ ಸ್ಟೇಫ್ ಹಾಕಿದ್ದಾರೆ..
ಸದ್ಯ ಆಸ್ಪತ್ರೆ ವೈದ್ಯರ ಹಾಡುಗಾರಿಗೆ ಹಾಗೂ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರು ಸಹ ಫುಲ್ ಖುಷ್ ಆಗಿದ್ದಾರೆ.
ಇನ್ನು ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆಯಲ್ಲಿ ೩೦ನೇ ಸ್ಥಾನಕ್ಕೆ ಕಲಬುರಗಿ ಜಿಲ್ಲೆ ಇಳಿದಿದೆ.ಜೊತೆಗೆ ಬೀದರ್ ಬಿಟ್ಟರೆ ಕಲಬುರಗಿಯಲ್ಲೇ ಅತೀ ಕಡಿಮೆ ಅಂದರೆ ಕೇವಲ ೩.೮%ಗೆ ಪಾಸಿಟಿವ್ ಸಂಖ್ಯೆ ಇಳಿದಿದೆ..
ಉಮೇಶ್ ಅಚಲೇರಿ ಎಕ್ಸ್ ಪ್ರೆಸ್ ಟಿವಿ ಕಲಬುರಗಿ