ಹಾವೇರಿ(ರಾಣೆಬೆನ್ನೂರು):ಕೊರೊನಾ ಸಂದರ್ಭದಲ್ಲಿ ರೋಗಿಗಳಿಂದ ಹಿಡಿದು ಬಡವ, ಶಮ್ರಿಕ ಸೇರಿ ಇತರೆ ವರ್ಗದವರಿಗೆ ದಾನಿಗಳು ಮುಂದೆ ಬಂದು ದಾನ ಮಾಡುವುದನ್ನು ನೋಡಿದ್ದೇವೆ.ಆದರೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಾತ್ರ ಅನಾಮಧೇಯ ವ್ಯಕ್ತಿಯೊಬ್ಬರು ಸುಮಾರು ೫೦ ಲಕ್ಷ ರೂಪಾಯಿ ಬೆಲಬಾಳುವ ಔಷಧಿಗಳ ದಾನ ಮಾಡಿ ತೆರೆಮರೆಗೆ ಉಳಿದಿದ್ದಾರೆ.
ಅಂದ ಹಾಗೇ ಕೋವಿಡ್‌ಗೆ ಸಂಬAಧಿಸಿದAತೆ ಸುಮಾರು ೫೦ ಲಕ್ಷ ರೂಪಾಯಿ ಮೌಲ್ಯದ ಔಷಧಿಗಳು, ಮಾಸ್ಕ್, ಫೇಸ್ ಶೀಲ್ಡ್, ಮತ್ತು ಇಂಜೆಕ್ಷನ್‌ಗಳನ್ನು ಹೆಸರು ಹೇಳಲು ಇಚ್ಛಿಸದ ದಾನಿಯೊಬ್ಬರು ಹಾವೇರಿ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದ್ದಾರೆ…
ಸದ್ಯ ಹಾವೇರಿ ಜಿಲ್ಲಾಡಳಿತವು ಶೀಘ್ರದಲ್ಲೇ ಇದನ್ನು ಜಿಲ್ಲೆಯ ಕೋವಿಡ್ ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ನೀಡಲಿದ್ದು,ಹಾವೇರಿ ಜಿಲ್ಲಾಧಿಕಾರಿ ಆ ಅಪರಿಚಿತ ದಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಬಸವನಗೌಡ ಎಕ್ಸ್ ಪ್ರೆಸ್ ಟಿವಿ (ರಾಣೆಬೆನ್ನೂರು) ಹಾವೇರಿ