ಈಜು ಕೊಳದ ಮಧ್ಯದಲ್ಲಿ ಮಂಟಪ ನಿರ್ಮಾಣ – ಡಿಫರೆಂಟ್ ಆಗಿ ಮದುವೆ ಆಗಲು ರೆಡಿಯಾದ ಲವ್ ಮಾಕ್ಟೈಲ್ ಜೋಡಿ..!

ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಕಳೆದ ಐದಾರು ತಿಂಗಳಿನಿಂದ ಒಂದಾದ ಮೇಲೆ ಒಂದರಂತೆ ಭರ್ಜರಿಯಾಗಿ ಮದುವೆ ಸಮಾರಂಭ ನಡೆಯುತ್ತಿದ್ದು, ಕೆಲ ಸ್ಟಾರ್ ನಟ-ನಟಿಯರು ಸೇರಿದಂತೆ ಕಿರುತೆರೆ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದರಂತಯೇ ಸ್ಯಾಂಡಲ್ ವುಡ್ ನಲ್ಲಿ 2021 ರ ವರ್ಷದ ಮೊದಲ ಮದುವೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರದ್ದು, ಈ ಜೋಡಿ 2021 ಫೆಬ್ರವರಿ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದೆ. ಈಗಾಗಲೇ ಮದುವೆ ತಯಾರಿ ಕೂಡ ಭರ್ಜರಿಯಾಗಿ ನಡೆಯುತ್ತಿದೆ.ವಿಶೇಷ ರೀತಿಯಲ್ಲಿ ಮದುವೆಯಾಗಲು ಈ ಜೊಡಿ ನಿರ್ಧರಿಸಿದ್ದು, ಫೆಬ್ರವರಿ 14ರ ಬೆಳ್ಳಂಬೆಳಗ್ಗೆಯೇ ಮುಹೂರ್ತವಿರುತ್ತದೆ. ಸಂಜೆ ಆರತಕ್ಷತೆ ಕಾರ್ಯಕ್ರಮವಿರುತ್ತದೆ. ಮಿಲನಾ ಈಜುಗಾರ್ತಿ, ಹೀಗಾಗಿ ಈಜುಕೊಳದ ಮಧ್ಯೆ ಮಂಟಪವಿರಲಿದೆಯಂತೆ. ಇನ್ನೂ ಮಿಲನ ನಾಗರಾಜ್ ಅವರಿಗೆ ಮದುವೆ ಪ್ರತಿಯೊಂದು ರೀತಿಯಲ್ಲೂ ತುಂಬ ವಿಶೇಷವಾಗಿರಬೇಕಂತೆ ಹಾಗಾಗಿ ಬಹಳ ವಿಶೇಷವಾಗಿ ಮದುವೆ ಆಗಲು ರೆಡಿಯಾಗುತ್ತಿದ್ದೇವೆ ಎಂದು ಡಾರ್ಲಿಂಗ್ ಕೃಷ್ಣ ತಮ್ಮ ಮದುವೆ ಬಗೆಗಿನ ಮಾಹಿತಿ ಹಂಚಿಕೊಂಡಿದ್ದು, ಮೂಲಗಳಿಂದ ತಿಳಿದು ಬಂದಿದೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment