ತೂಕ ಸಮತೋಲನಕ್ಕೆ ಬೇಕು ಏಲಕ್ಕಿ..!

ನಾವೆಲ್ಲರೂ ತೂಕ ಇಳಿಸಿಕೊಳ್ಳಬೇಕೆಂದು ಹಲವು ಹೊಸ- ಹೊಸ ತಯಾರಿ ಮಾಡುತ್ತಲೇ ಇರುತ್ತೇವೆ. ಆದ್ರೆ ಮನೆಯಲ್ಲೇ ಸಿಗುವ ಈ ಸಣ್ಣ ವಸ್ತುವಿನಿಂದ ನಮ್ಮ ದೇಹದ ತೂಕವನ್ನು ಬಲು ಬೇಗ ಕಡಿಮೆ ಮಾಡಬಹುದಂತೆ. ಹೌದು ಮನೆಯಲ್ಲೇ ಸಿಗುವ ಏಲಕ್ಕಿಯಿಂದ ನಾವು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಬಹುದಂತೆ. ಹಾಗಾದ್ರೆ ಈ ಏಲಕ್ಕಿಯಿಂದ ಯಾವೆಲ್ಲಾ ವಿಧಾನದಿಂದ ದೇಹದ ತೂಕವನ್ನು ಕಡಿಮೆ ಮಾಡಿ ಕೊಳ್ಳಬಹುದು ಅನ್ನೊದನ್ನು ತೋರುಸ್ತೀವಿ.
ಏಲಕ್ಕಿಯನ್ನು ಖೀರು, ಹಲ್ವಾ, ಪಲಾವ್ ನಂತಹ ಅನೇಕ ಖಾದ್ಯಗಳಿಗೆ ಬಳಸುವುದರಿಂದ ಪರಿಮಳವನ್ನು ನೀಡುತ್ತದೆ. ಹಸಿರು ಏಲಕ್ಕಿ ಸೇವಿಸಿದಲ್ಲಿ ಹೊಟ್ಟೆಯ ಸುತ್ತ ಬೊಜ್ಜು ಬೆಳೆಯಲಾರದು. ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ಮ ಮಟ್ಟವನ್ನು ಸಹ ನಿಯಂತ್ರಿಸುತ್ತದೆ.ಆಯುರ್ವೇದದ ಪ್ರಕಾರ, ಹಸಿರು ಏಲಕ್ಕಿ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ತೆಗೆದು ಹಾಕಲು ಸಹ ಸಹಾಯ ಮಾಡುತ್ತದೆ. ವಿಷಕಾರಿ ಅಂಶಗಳು ದೇಹದ ರಕ್ತದ ಹರಿವನ್ನುಅಡ್ಡಿ ಪಡಿಸುತ್ತದೆ ಮತ್ತು ನಮ್ಮ ಶಕ್ತಿಯ ಮಟ್ಟವನ್ನು ಸಹ ಕಡಿಮೆ ಮಾಡುತ್ತದೆ. ಇದಕ್ಕೆ ಏಲಕ್ಕಿ ಚಹಾ ಅತ್ಯುತ್ತಮವಾಗಿದೆ. ಹಸಿರು ಏಲಕ್ಕಿ ಅಜೀರ್ಣವನ್ನು ತಡೆಯುತ್ತದೆ, ತೂಕ ಇಳಿಸಿಕೊಳ್ಳಲು ಕೂಡ ಸಹಾಯಕವಾಗಿದೆ.ದೇಹದಲ್ಲಿ ಮೂತ್ರದ ರೂಪದಲ್ಲಿ ನೀರು ಸಂಗ್ರಹವಾಗುವುದನ್ನು ತಡೆಯುತ್ತದೆ. ಹಸಿರು ಏಲಕ್ಕಿಯ ಆಯುರ್ವೇದ ಗುಣ ಲಕ್ಷಣಗಳನ್ನು ಹೊಂದಿದ್ದು, ಇದು ಮೂತ್ರ ಪಿಂಡಗಳ ಸುಗಮ ಕಾರ್ಯ ನಿರ್ವಹಣೆಯನ್ನು ಉತ್ತೇಜಿಸುತ್ತದೆ. ಏಲಕ್ಕಿ ಕೊಬ್ಬನ್ನು ಕಡಿಮೆ ಮಾಡುವ ಗುಣ ಹೊಂದಿದ್ದು, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಹಾಗಾದ್ರೆ ಇನ್ನೇಕೆ ತಡ ಏಲಕ್ಕಿಯನ್ನು ತಿನ್ನಿ ನಿಮ್ಮ ಆರೋಗ್ಯ ವೃದ್ಧಿಸಿ ಕೊಳ್ಳಿ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment