ರುಚಿಯಾದ ಅಡುಗೆಗೆ ಈರುಳ್ಳಿ ಬದಲಿಗೆ ಏನೇನು ಬಳಸಬಹುದು ಗೊತ್ತ..?

ಒಂದು ಕಡೆ ಗಗನ ಏರುತ್ತಿರುವ ಈರುಳ್ಳಿ ಬೆಲೆಯಿಂದಾಗಿ ಅದನ್ನು ಕತ್ತರಿಸುವುದಕ್ಕೆ ಮೊದಲೇ ಕಣ್ಣಿನಲ್ಲಿ ನೀರು ಬರುವ ಪರಿಸ್ಥಿತಿ ಉಂಟಾಗಿದೆ. ಇನ್ನು ಈರುಳ್ಳಿ ಹಾಕದೆ ಸಾರು ಅಥವಾ ಪಲ್ಯ ಮಾಡಿದರೆ ರುಚಿಸುವುದೇ ಇಲ್ಲ, ಇನ್ನು ಸಾರು, ಗ್ರೇವಿ ಈರುಳ್ಳಿ ಇಲ್ಲದೆ ಮಾಡುವುದೇ ಹೇಗೆ ಎಂಬುವುದೇ ಹೆಚ್ಚಿನವರ ಚಿಂತೆಯಾಗಿದೆ. ಇನ್ನು ಈರುಳ್ಳಿ , ಬೆಳ್ಳುಳ್ಳಿ ಹಾಕದೆ ಅಡುಗೆ ಮಾಡೋಣ ಅಂದರೆ ಈರುಳ್ಳಿ ರುಚಿ ನೋಡಿದವರಿಗೆ ಅಷ್ಟು ಇಷ್ಟವಾಗುವುದಿಲ್ಲ. ಅಡುಗೆಗೆ ಈರುಳ್ಳಿ ಹಾಕಿದರೆ ಅದರ ಸ್ವಾದವೇ ಬೇರೆ. ಟೊಮೆಟೊ ಗೊಜ್ಜು, ಪಲ್ಯ ಇವುಗಳು ರುಚಿಯಾಗಲು ಈರುಳ್ಳಿ ಬೇಕೇಬೇಕು.
1) ಗ್ರೇವಿ, ಸಾರುಗೆ ಮಾಡಲು ಈರುಳ್ಳಿ ಬದಲಿಗೆ ಗೋಡಂಬಿ ಕೂಡ ಅಧಿಕ ಬೆಲೆಯ ನಟ್ಸ್ ಆಗಿದ್ದರೂ ಹೀಗಿನ ಈರುಳ್ಳಿ ಬೆಲೆಗೆ ಹೋಲಿಸಿದರೆ ಗೋಡಂಬಿ ಬಳಸುವುದೇ ಸೂಕ್ತವಾಗಬಹುದು. ಒಂದು ಸಾರು ಮಾಡಲು ಕಡಿಮೆಯೆಂದರೂ ಸಾಧಾರಣ ಗಾತ್ರದ ಒಂದು ಈರುಳ್ಳಿ ಬೇಕು. ಅದೇ ಗ್ರೇವಿಯಾದರೆ ಈರುಳ್ಳಿ ಸ್ವಲ್ಪ ಅಧಿಕವೇ ಬೇಕು. ಪನ್ನೀರ್, ನಾನ್ವೆಜ್ ಗ್ರೇವಿಗೆ ಈರುಳ್ಳಿ ಹೆಚ್ಚು ಹಾಕಿದರೆ ಮಾತ್ರ ರುಚಿ. ಈರುಳ್ಳಿ ಬೆಲೆ ಅಧಿಕವಾಗಿರುವಾಗ ಈರುಳ್ಳಿ ಬದಲಿಗೆ ಗೋಡಂಬಿ ಹಾಕಿದರೆ ರುಚಿ ಚೆನ್ನಾಗಿ ಬರುತ್ತದೆ.
2) ಉತ್ತರ ಕರ್ನಾಟಕದಲ್ಲಿ ಕಡಲೆ ಹಿಟ್ಟು ಗ್ರೇವಿ ಹೆಚ್ಚಾಗಿ ಮಾಡಲಾಗುವುದು. ಕಡಲೆ ಹಿಟ್ಟು ಹಾಕಿದಾಗ ಗ್ರೇವಿ ರೀತಿ ಗಟ್ಟಿಯಾಗಿ ಬರುವುದರಿಂದ ಈರುಳ್ಳಿ ಹಾಕದಿದ್ದರೂ ನಡೆಯುತ್ತೆ.
3) ಆಲೂಗಡ್ಡೆ ಆಲೂಗಡ್ಡೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ, ಸ್ವಲ್ಪ ಉಪ್ಪು ಹಾಗೂ ಮಸಾಲೆ ಹಾಕಿ ಮ್ಯಾಶ್ ಮಾಡಿ ಸಂಬಾರ್ ಗೆ ಹಾಕಿದರೆ ಸಂಬಾರ್ ರುಚಿಯಾಗುವುದು.
4) ಪನ್ನೀರ್ ಅನ್ನು ಮ್ಯಾಶ್ ಮಾಡಿ ಈರುಳ್ಳಿ ಬದಲಿಗೆ ಬಳಸಬಹುದು.
5) ಸೋರೆಕಾಯಿ/ಪಡವಲಕಾಯಿ ಇದನ್ನು ತುರಿದ ಈರುಳ್ಳಿ ರೀತಿ ಪಲ್ಯ ಮಾಡುವಾಗ ಬಳಸಬಹುದು.
6) ಈರುಳ್ಳಿ ಪುಡಿ ಈರುಳ್ಳಿಯಷ್ಟು ದುಬಾರಿಯಲ್ಲ. ಅಡುಗೆಗೆ ಈರುಳ್ಳಿ ರುಚಿ ಬೇಕೇಬೇಕು ಎಂದು ಬಯಸುವುದಾದರೆ ಈರುಳ್ಳಿ ಪುಡಿ ಬಳಸಬಹುದು. ಈರುಳ್ಳಿ ಹಾಕದ ಸಾರಿಗೆ ಸ್ವಲ್ಪ ಇಂಗು ಹಾಕಿದರೆ ರುಚಿ ಚೆನ್ನಾಗಿಯೇ ಬರುತ್ತದೆ. ಇನ್ನು ಸಲಾಡ್ಗೆ ಈರುಳ್ಳಿ ಬದಲಿಗೆ ಸೌತೆಕಾಯಿಯಿಂದಲೂ ಕೂಡ ಅಲಂಕರಿಸಬಹುದು. ಈರುಳ್ಳಿ ದುಬಾರಿಯಾದಾಗ ಈರುಳ್ಳಿ ಬಗ್ಗೆ ಚಿಂತೆ ಮಾಡುವ ಬದಲು ಮೊದಲೆಲ್ಲಾ ಮಳೆಗಾಲಕ್ಕಾಗಿ ಈರುಳ್ಳಿ ಸಂಗ್ರಹಿಸಿಡುತ್ತಿದ್ದ ಹಾಗೆ ಮಾಡಿಟ್ಟರೆ ಈ ರೀತಿ ಬೆಲೆ ಹೆಚ್ಚಿದಾಗ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಈರುಳ್ಳಿಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಸಂಗ್ರಹಿಸಿಟ್ಟರೆ ವರ್ಷದವರೆಗೆ ಬಳಸಬಹುದಾಗಿದೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment