Connect with us

ಕೋಲಾರ

ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕಾರಿಣಿ ಸಭೆ- ನೆ.ಲ ನರೇಂದ್ರ ಬಾಬು..!

Published

on

ಕೋಲಾರ: ಹಿಂದುಳಿದಿರುವ ಸಮುದಾಯಗಳನ್ನು ಪಕ್ಷದ ಚೌಕಟ್ಟಿನಲ್ಲಿ ಸಂಘಟಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾದ್ಯಂತ ಕಾರ್ಯಕಾರಣಿ ಸಭೆ ನಡೆಸಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ನೆ.ಲ ನರೇಂದ್ರ ಬಾಬು ಹೇಳಿದ್ರು. ಕೋಲಾರ ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ರು. ಕಾರ್ಯಕಾರಣಿ ಸಭೆಯನ್ನು ಸಂಸದ ಎಸ್ ಮುನಿಸ್ವಾಮಿ ಉದ್ಘಾಟಿಸಿದರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ವರ್ಗಗಳಿಗೆ ಅನೇಕ ಯೋಜನೆ ತಂದಿದೆ, ಈ ಯೋಜನೆಗಳನ್ನು ಹಿಂದುಳಿದ ಸಮುದಾಯದ ವರ್ಗಗಳಿಗೆ ತಲುಪಿಸಲು ಬಿಜೆಪಿ ಕಾರ್ಯಕರ್ತರು ಶ್ರಮವಹಿಸಬೇಕೆಂದರು. ಇನ್ನೂ ರಾಜ್ಯದಲ್ಲಿ ಮುಖ್ಯವಾಹಿನಿಗೆ ಬಾರದೇ ಉಳಿದುಕೊಂಡಿರುವ ಸಮುದಾಯಗಳನ್ನು ಗುರ್ತಿಸಲು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರತಿ ಜಿಲ್ಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ಆ ಸಮುದಾಯಗಳನ್ನು ಗುರ್ತಿಸಿ ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲಗೊಳಿಸಲು ಬಿಜೆಪಿ ಹೋರಾಟ ನಡೆಸಲಿದೆ ಎಂದರು.

ವರದಿ- ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ

Continue Reading
Click to comment

Leave a Reply

Your email address will not be published. Required fields are marked *

ಕೋಲಾರ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾಗಿಯಾದ ಸಚಿವ ನಾಗೇಶ್..!

Published

on

By

ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಅದ್ದೂರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ನೆರವೇರಿದ್ದು, ಮುಳಬಾಗಿಲು ಪಟ್ಟಣದ ಡಿವಿ ಗುಂಡಪ್ಪ ಭವನದಲ್ಲಿ ಆಯೋಜಿಸಿದ್ದ 7 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಉಸ್ತುವಾರಿ ಸಚಿವ ಎಚ್ ನಾಗೇಶ್ ಚಾಲನೆ ನೀಡಿದರು, ಸಮ್ಮೇಳನಾ ಅಧ್ಯಕ್ಷ್ಯ ಚಾಂದ್ ಪಾಷಾ ರವರನ್ನ ಮೆರವಣಿಗೆ ಮೂಲಕ ಕರೆತರುವಾಗ ಎಲ್ಲಾರು ಒಗ್ಗೂಡಿ ಸಂಭ್ರಮದಿಂದ ತಮಟೆ,ವಾದ್ಯಕ್ಕೆ ಕುಣಿದರು, ಇನ್ನೂ ಕಾರ್ಯಕ್ರಮದಲ್ಲಿ ಸಮ್ಮೇಳನ ಅಧ್ಯಕ್ಷ್ಯ ಚಾಂದ್ ಪಾಷಾ ದಂಪತಿಗಳು, ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ್ಯ ನಾಗಾನಂದ ಕೆಂಪರಾಜ್, ತಹಶಿಲ್ದಾರ್ ರಾಜಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ಚರಿ ದೇವಿ, ಸಬ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ಜೆಡಿಎಸ್ ಹಿರಿಯ ಮುಖಂಡ ಆಲಂಗೂರು ಶಿವಣ್ಣ ಸೇರಿದಂತೆ ಹಲವು ಕನ್ನಡಪರ ಸಂಘಟನೆಯ ಮುಖಂಡರು, ಅಧಿಕಾರಿಗಳು, ಕನ್ನಡ ಪ್ರೇಮಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು, ಇನ್ನೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಚಿವ ಎಚ್ ನಾಗೇಶ್ ರವರು, ಮುಳಬಾಗಿಲು ತಾಲೂಕಿನ ವಿವಿಧ ದೇಗುಲದಲ್ಲಿ ನಾವು ಸಾಹಿತ್ಯವನ್ನು ಕಾಣಬಹುದು, ಪುರಾತನ ಮಾಹಿತಿ ಸಾರುವ ಅದೇಷ್ಟು ದೇಗುಲ ನಮ್ಮಲ್ಲಿದೆ, ನಾವೆಲ್ಲರು ಮೊದಲು ಸ್ಥಳೀಯವಾಗಿರುವ ಸಾಹಿತ್ಯವನ್ನು ಅರಿತುಕೊಳ್ಳಬೇಕಿದೆ, ಕರ್ನಾಟಕದಲ್ಲಿ ಹುಟ್ಟಿದವರೆಲ್ಲರು ಕನ್ನಡ ಪ್ರೇಮಿಗಳೇ, ನಾನು ಕರ್ನಾಟಕದಲ್ಲಿ ಹುಟ್ಟಿ ಬೆಳೆದಿದ್ದಕ್ಕೆ ನನಗೆ ಹೆಮ್ಮೆಯಾಗಿದೆ, ಇನ್ನೂ ಹಲವು ಕಾರ್ಯಕ್ರಮಗಳಿಂದ ಬಿಡುವಿಲ್ಲದೆ ಇದ್ದರು, ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ತಪ್ಪದೇ ಬರಬೇಕೆಂದು ಆಸೆಯಿಂದ ಭಾಗಿಯಾಗಿದ್ದೇನೆ ಎಂದರು.

ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು

Continue Reading

ಕೋಲಾರ

ಕುರುಬ ಸಮುದಾಯ ಮೀಸಲಾತಿ ಹೋರಾಟ ಪೂರ್ವಭಾವಿ ಸಭೆ..!

Published

on

By

ಕೋಲಾರ: ಎಸ್.ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಕರ್ನಾಟಕ ರಾಜ್ಯದಲ್ಲಿರುವ ಕುರುಬ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಫೆಬ್ರವರಿ 7 ರಂದು ಬೃಹತ್ ಹೋರಾಟ ಸಭೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುರುಬರ ಎಸ್.ಟಿ ಮೀಸಲಾತಿ ಹೋರಾಟ ಸಮಿತಿ ಮುಖಂಡ ದೇವರಾಜ್ ಹೇಳಿದ್ದಾರೆ. ಕೋಲಾರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಸ್.ಟಿ ಹೋರಾಟ ಸಮಿತಿ ಮುಖಂಡರು ಬೆಂಗಳೂರಿನ ಬೃಹತ್ ಹೋರಾಟ ಸಭೆ ಅಂಗವಾಗಿ ಕೋಲಾರದಲ್ಲಿ ಜ.12 ರಂದು ಕೆ.ಇ.ಬಿ ಸಮುದಾಯ ಭವನದಲ್ಲಿ ಪೂರ್ವ ಭಾವಿ ಸಭೆಯನ್ನು ಹಮ್ಮಿಕೊಂಡಿದ್ದು, ಈ ಸಭೆಗೆ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪೀಠಾಧಿಪತಿಗಳು, ಸ್ವಾಮೀಜಿಗಳು,ಸಚಿವರಾದ ಕೆ.ಎಸ್ ಈಶ್ವರಪ್ಪ,ವಿಧಾನಪರಿಷತ್ ಸದಸ್ಯರಾದ ಎಂಟಿ ನಾಗರಾಜ್ ಸೇರಿದಂತೆ ರಾಜ್ಯ ಮಟ್ಟದ ಸಮುದಾಯದ ಮುಖಂಡರು ಭಾಗಿಯಾಗಿ ಎಸ್.ಟಿ ಮೀಸಲಾತಿ ಹೋರಾಟದ ಬಗ್ಗೆ ಮಾರ್ಗದರ್ಶನ ನೀಡಲ್ಲಿದ್ದಾರೆ. ಎಸ್.ಟಿ ಮೀಸಲಾತಿಯಿಂದ ಶೈಕ್ಷಣಿಕವಾಗಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆವಿಗೂ ಸೌಲಭ್ಯಗಳು ದೊರೆಯುತ್ತದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ಇಲಾಖೆಗಳಲ್ಲಿ ಉದ್ಯೋಗ ಮೀಸಲಾತಿ ಹಾಗೂ ಕೃಷಿಕ್ಷೇತ್ರದಲ್ಲಿ ಹೆಚ್ಚಿನ ಸೌಲಭ್ಯಗಳು, ರಾಜಕೀಯ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶ ಸಿಕ್ಕಿ ರಾಜ್ಯದಲ್ಲಿ ಹಿಂದುಳಿದಿರುವ ಕುರುಬ ಸಮುದಾಯ ಮುಖ್ಯವಾಹಿನಿಗೆ ಬರುಬೇಕು ಎಂಬುದೇ ನಮ್ಮ ಮೀಸಲಾತಿ ಹೋರಾಟದ ಆಶಯವಾಗಿದೆ, ಕುರುಬ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರಿಸಲು ಬೇಕಾದ ದಾಖಲೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಎಸ್.ಟಿ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಾಗರ್ ಹೇಳಿದ್ರು. ಅಂದು ಪೂರ್ವಭಾವಿ ಸಭೆಗೆ ಜಿಲ್ಲೆಯ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೀಸಲಾತಿ ಹೋರಾಟವನ್ನು ಯಶ್ವಸಿಗೊಳಿಸಬೇಕಾಗಿ ಮುಖಂಡರು ಮನವಿ ಮಾಡಿದರು.

ವರದಿ- ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ

Continue Reading

ಕೋಲಾರ

ಸಚಿವರ ಮುಂದೆಯೇ ಶಾಸಕರು ಹಾಗೂ ಸಂಸದರ ಜಟಾಪಟಿ..!

Published

on

By

ಕೋಲಾರ: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸಚಿವರ ಮುಂದೆ ಶಾಸಕ ಹಾಗೂ ಸಂಸದರ ನಡುವೆ ವಾಗ್ವಾದ ನಡೆದಿದ್ದು, ಕೋಲಾರ ಸಂಸದ ಮುನಿಸ್ವಾಮಿ ಮತ್ತು ಮಾಲೂರಿನ ಶಾಸಕ ನಂಜೇಗೌಡ ಸಚಿವರಾದ ಸಿಸಿ ಪಾಟಿಲ್ ಎದುರಲ್ಲೆ ಜಟಾಪಟಿ ನಡೆಸಿದ್ದಾರೆ. ಮಾಲೂರಿನ ಕೊಮ್ಮನಹಳ್ಳಿ ಗ್ರಾಮದ ಬಳಿ ಇರುವ ನಂಜೇಗೌಡ ಮಾಲಿಕತ್ವದ ಕ್ರಷರ್ ಗೆ ಇಂದು ಸಚಿವರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸರ್ಕಾರಿ ಗುಂಡು ತೋಪಿನಲ್ಲಿ ಕ್ರಷರ್ ಮಾಡಿದ್ದಾರೆ ಎಂದು ಸಂಸದರು ಆರೋಪಿಸಿದ್ದಾರೆ. ಇನ್ನೂ ಗಣಿ ಹಾಗೂ ಭೂ ವಿಜ್ಞಾನಿ ಸಚಿವರಾಗಿರುವ ಸಿಸಿ ಪಾಟೀಲ್ ಕ್ರಷರ್ ಭೇಟಿ ಸಂದರ್ಭದಲ್ಲಿ,ಗುಂಡು ತೋಪಿನಲ್ಲಿ ಶಾಸಕರು ಕ್ರಷರ್ ಮಾಡುತ್ತಿದ್ದಾರೆ ಎಂದು ಸಂಸದ ಮುನಿಸ್ವಾಮಿ ಹೇಳಿದರು. ಸಚಿವರ ಮುಂದೆಯೇ ಬಹಿರಂಗವಾಗಿ ಹೇಳಿದ್ದನ್ನು ವಿರೋಧಿಸಿದ ಶಾಸಕರು, ಇದೆಲ್ಲಾ ಬಿಡಪ್ಪ ಪರ್ಸನಲ್ ಆಗಿ ತಗೋಬೇಡ ಎಂದು ಕೆರಳಿದ್ದಾರೆ.ಈ ವೇಳೆ ಸಂಸದ ಮುನಿಸ್ವಾಮಿ ನೀವು ಇದೆಲ್ಲಾ ಬಿಡಿ ನನಗೂ ಎಲ್ಲಾ ಗೊತ್ತಿದೆ ಎಂದು ಎರಡು ಗುಂಪಿನ ನಡುವೆ ಮಾತಿನ ಚಕಮಖಿ ನಡೆದಿದೆ. ಇನ್ನೂ ಈ ಸಂದರ್ಭದಲ್ಲಿ ರಾಜಕೀಯವನ್ನು ರಾಜಕೀಯವಾಗಿ ಎದುರಿಸಿ ವೈಯಕ್ತಿಕ ಬೇಡ ಎಂದು ಶಾಸಕರು ಟಾಂಗ್ ನೀಡಿದ್ರು.

ವರದಿ: ಮಾರುತೇಶ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಮಾಲೂರು

Continue Reading

Trending

Copyright © 2023 EXPRESS TV KANNADA

kuşadası escort kayseri escort kocaeli escort canlı maç izle selcuksports güvenilir bahis siteleri deneme bonusu deneme bonusu veren siteler bahis siteleri https://resimlihaber.org/ canlı bahis siteleri güvenilir bahis siteleri http://seu.frvm.utn.edu.ar/guvenilir-bahis-siteleri.html deneme bonusu veren sitelercasino sitelerimıknatısmaç izle