Connect with us

ಗದಗ

ಮಕ್ಕಳ ವಿದ್ಯಾಭ್ಯಾಸಕ್ಕೆಂದು ತಾಳಿ ಅಡವಿಟ್ಟ ತಾಯಿ.. ಮಾಜಿ ಸಚಿವ ಜಮೀರ್ ಅಹಮ್ಮದ್ ನೆರವು..!

Published

on

ಗದಗ: ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ತನ್ನ ತಾಳಿ ಅಡವಿಟ್ಟು ಮನೆಗೆ ಟಿವಿ ತಂದಿದ್ದ ಮಹಿಳೆಗೆ ಇದೀಗ ಮಾಜಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಬಂದಿದ್ದಾರೆ. ಗದಗ ಜಿಲ್ಲೆ ನಾಗೂರು ಗ್ರಾಮದ ಕಸ್ತೂರಿ ಎಂಬ ಮಹಿಳೆ ಮಕ್ಕಳ ಶಿಕ್ಷಣಕ್ಕಾಗಿ ತನ್ನ ತಾಳಿ ಅಡವಿಟ್ಟು ಮನೆಗೆ ಟಿವಿ ತಂದಿದ್ದರು. ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಮಾಜಿ ಸಚಿವ ಜಮೀರ್ ಅಹಮದ್ 50 ಸಾವಿರ ರೂಪಾಯಿ ಧನ ಸಹಾಯ ಮಾಡುವುದಾಗಿ ಟ್ವಿಟರ್ನಲ್ಲಿ ತಿಳಿಸಿದ್ದರು. ಅದರಂತೆ ಇಂದು ಜಮೀರ್ ಆಪ್ತ ಸಹಾಯಕನ ಬಳಿ 50 ಸಾವಿರ ರೂಪಾಯಿ ಹಣ ಕಳುಹಿಸಿದ್ದಾರೆ. ಅಡವಿಟ್ಟ ತಾಳಿ ಬಿಡಿಸಲು 15 ಸಾವಿರ ಹಾಗು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 35 ಸಾವಿರ ನೀಡಿ ಮಾನವೀಯತೆ ಮೆರೆದಿದ್ದಾರೆ.

ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Continue Reading
Click to comment

Leave a Reply

Your email address will not be published. Required fields are marked *

ಗದಗ

ಗದಗದಲ್ಲಿ ಡಿಎಪಿ ರಸಗೊಬ್ಬರಕ್ಕಾಗಿ ರೈತರ ಪರದಾಟ…

Published

on

By

ಗದಗ: ಗದಗ ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರಕ್ಕಾಗಿ ರೈತರು ಪರದಾಟ ಆರಂಭಿಸಿದ್ದಾರೆ.

ಸದ್ಯ ಮುಂಗಾರು ಹಂಗಾಮಿನ ಬೆಳೆಗಳಿಗೆ ಬಿತ್ತನೆ ಮಾಡಲು ಡಿಎಪಿ ರಸಗೊಬ್ಬರ ಅವಶ್ಯಕವಾಗಿರುವ ಹಿನ್ನೆಲೆಯಲ್ಲಿ ಈ ಗೊಬ್ಬರಕ್ಕಾಗಿ ರೈತರು ಪರದಾಟ ನಡೆಸುತ್ತಿದ್ದಾರೆ.

ಇನ್ನು ಡಿಎಪಿ ರಸಗೊಬ್ಬರ ಇದ್ದರು ಅದನ್ನು ಕೊಡುವುದಕ್ಕೆ ಅಂಗಡಿ ಮಾಲೀಕರು ನಿರಾಕರಿಸುತ್ತಿದ್ದಾರೆ. ಅಲ್ಲದೆ, ೧೦ ಗಂಟೆ ನಂತರ ಬನ್ನಿ ಗೊಬ್ಬರ ನೀಡುತ್ತೇವೆ ಎಂಬ ಸಬೂಬು ಹೇಳುತ್ತಿದ್ದಾರೆ ಅಂತ ಗದಗ ತಾಲೂಕಿನ ಹರ್ತಿ ಗ್ರಾಮದ ರೈತರು ಆಕ್ರೋಶ ವ್ತಕ್ತಪಡಿಸಿದ್ದಾರೆ.

ಇದರ ಜೊತೆಗೆ ತಾಂತ್ರಿಕ ಕಾರಣದಿಂದ ಬಯೋಮೆಟ್ರಿಕ್ ಬಂದ್ ಆಗಿರುವ ಹಿನ್ನೆಲೆಯಲ್ಲಿ ಗೊಬ್ಬರ ಖರೀದಿಗೆ ಬಂದ ರೈತರು ಖಾಲಿ ಕೈಯಲ್ಲಿ ವಾಪಸ್ ತೆರಳುವಂತಾಗಿದೆ.

ರಾಕೇಶ್ ಎಕ್ಸ್ ಪ್ರೆಸ್ ಟಿವಿ ಗದಗ

Continue Reading

ಆರೋಗ್ಯ / HEALTH

ದೇಶಕ್ಕೆ ಕೊರೊನಾ ಚಿಂತೆ..ಗದಗದಲ್ಲಿ ಮಾತ್ರ ಕೆಲವರಿಗೆ ಇಸ್ಪೀಟ್ ಆಟ ಬೇಕಂತೆ..

Published

on

ಗದಗ: ಇಡೀ ದೇಶವನ್ನೇ ಲಾಕ್‌ಡೌನ್ ಮಾಡಲಾಗಿದೆ.ಆದರೆ ಗದಗ ಜಿಲ್ಲೆಯಲ್ಲಿ ಮಾತ್ರ ಕೆಲ ಯುವಕರಿಗೆ ಬುದ್ದಿ ಬಂದಿಲ್ಲ ಅನ್ನಿಸುತ್ತೆ..ಯಾಕಂದ್ರೆ ಲಾಕ್‌ಡೌನ್ ಇದ್ದರೂ ಮನೆಯಲ್ಲಿ ಇರದೇ ಪುಂಡಾಟ ಮೆರೆಯುತ್ತಿರುವ ಈ ಯುವಕರು ಬೆಟ್ಟದಂತಹ ಪ್ರದೇಶದಲ್ಲಿ ಗುಂಪು ಸೇರಿ ಜೂಜಾಟ ಶುರುವಿಟ್ಟುಕೊಂಡಿದ್ದಾರೆ.
ಅ0ದ ಹಾಗೇ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಈ ಯುವಕರು ಜೂಜಾಟ ಆಡಲು ಬೆಟ್ಟದ ಬಳಿ ತೆರಳುತ್ತಿದ್ದು, ಬೆಟ್ಟದ ಮೇಲಿರುವ ಐತಿಹಾಸಿಕ ಕೋಟೆ ಭಾಗದಲ್ಲಿ ಯುವಕರ ದಂಡು ಜೂಜಾಟ ಆಡುತ್ತಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಈ ಜೂಜಾಟದಲ್ಲಿ ತೊಡಗಿಕೊಂಡಿದ್ದಾರೆ. ಗಜೇಂಡ್ರಗಡ ನಗರದ ಸುತ್ತಮುತ್ತ ಅನೇಕ ಕಡೆಗಳಲ್ಲಿ ಅವ್ಯಾಹತವಾಗಿ ಈ ದಂಧೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.
ಈ ಕುರಿತು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಟ್ಟದ ಮೇಲಿನ ಐತಿಹಾಸಿಕ ಕೋಟೆ ಭಾಗದ ಮಂಟಪ, ದ್ವಾರಬಾಗಿಲು, ಸಿಂಹಹೊ0ಡ, ಮದ್ದಿನ ಕೋಣೆ, ಸರಸ್ವತಿ ಕೊಳ್ಳ ಸೇರಿದಂತೆ ಅನೇಕ ಕಡೆಗಳಲ್ಲಿ ಜೂಜಾಟವಾಡುತ್ತಿದ್ದಾರೆ.
ಇನ್ನು ಯಾರಾದರೂ ಬಂದರೆ ಎಸ್ಕೇಪ್ ಆಗಲು ಸರಳ ಮಾರ್ಗಕ್ಕೊಸ್ಕರ ಬೆಟ್ಟದ ಮೇಲೆ ಜೂಜಾಟವಾಡಲು ಹೊಗುತ್ತಿದ್ದಾರೆನ್ನಲಾಗುತ್ತಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Continue Reading

ಆರೋಗ್ಯ / HEALTH

ಲಾಕ್‌ಡೌನ್ ನಡುವೆ ರೈತನಿಗೆ ಬರೆ ಎಳೆದ ಮಳೆ..

Published

on

ಮುಂಡರಗಿ(ಗದಗ): ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದ ರೈತರು ಬೆಳದ ಫಸಲನ್ನು ಮಾರುಕಟ್ಟೆಗೆ ತಲುಪಿಸಲಾಗದೆ ಕಂಗೆಟ್ಟು ಹೋಗಿದ್ದಾರೆ. ಆದರೆ ಇದರ ನಡುವೆಯೇ ಗದಗ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆ ರೈತರನ್ನು ಮತ್ತಷ್ಟು ಕಂಗಾಲು ಮಾಡಿದೆ.
ಸದ್ಯ ಈ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದಲ್ಲಿ ಸುರಿದ ಮಳೆಯಿಂದಾಗಿ ಗ್ರಾಮದ ರೈತ ರಮೇಶ ಕಳಕರೆಡ್ಡಿ ಅವರ ಮಾವು ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಬಿರುಗಾಳಿ ರಭಸಕ್ಕೆ ಸುಮಾರು ೨ ಟನ್ ನಷ್ಟು ಮಾವು ಹಾಳಾಗಿದೆ.ಸಾಲ ಮಾಡಿ ೮ ಎಕರೆ ಮಾವಿನ ಬೆಳೆದಿದ್ದ ರಮೇಶ್, ಈ ಬಾರಿ ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಎಲ್ಲವೂ ಕೊಚ್ಚಿಕೊಂಡು ಹೋಗಿದೆ.ಒಂದೆಡೆ ಕೊರೊನಾ ಸಂಕಟ, ಇತ್ತ ಪ್ರಕೃತಿ ಹೊಡೆತದಿಂದ ಸಂಕಷ್ಟದಲ್ಲಿರುವ ರೈತರತ್ತ ಇನ್ನಾದರೂ ಸರ್ಕಾರ ಗಮನ ಹರಿಸಬೇಕಾಗಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Continue Reading

Trending

Copyright © 2023 EXPRESS TV KANNADA

canl覺 ma癟 izle selcuksports deneme bonusu deneme bonusu veren siteler bahis siteleri jojobet http://www.iztacalco.cdmx.gob.mx/inicio/guvenilir-bahis-siteleri.html deneme bonusu casino siteleriHacklink SatışıHack forumyaş sınırı olmayan bahis sitelerikareasbetdeneme bonusu veren sitelertürbanlı escortsiyah bayrak ayna amirdeneme bonusu veren sitelerkareasbet girişBursa EscortBakırköy Escort, Ataköy Escortbahis forumkareasbetbetingo güncel girişdizimatFındıkzade Escortbedavabahis.onlineBitcoin Kabul Eden Bahis Sitelerigüvenilir casino siteleridigital marketing agencydeneme bonusu veren sitelergobahis girişasper casino girişhermesbet