ಲಾಕ್‌ಡೌನ್ ನಡುವೆ ರೈತನಿಗೆ ಬರೆ ಎಳೆದ ಮಳೆ..

ಮುಂಡರಗಿ(ಗದಗ): ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯದ ರೈತರು ಬೆಳದ ಫಸಲನ್ನು ಮಾರುಕಟ್ಟೆಗೆ ತಲುಪಿಸಲಾಗದೆ ಕಂಗೆಟ್ಟು ಹೋಗಿದ್ದಾರೆ. ಆದರೆ ಇದರ ನಡುವೆಯೇ ಗದಗ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆ ರೈತರನ್ನು ಮತ್ತಷ್ಟು ಕಂಗಾಲು ಮಾಡಿದೆ.
ಸದ್ಯ ಈ ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದಲ್ಲಿ ಸುರಿದ ಮಳೆಯಿಂದಾಗಿ ಗ್ರಾಮದ ರೈತ ರಮೇಶ ಕಳಕರೆಡ್ಡಿ ಅವರ ಮಾವು ಬೆಳೆ ಸಂಪೂರ್ಣ ನೆಲ ಕಚ್ಚಿದೆ. ಬಿರುಗಾಳಿ ರಭಸಕ್ಕೆ ಸುಮಾರು ೨ ಟನ್ ನಷ್ಟು ಮಾವು ಹಾಳಾಗಿದೆ.ಸಾಲ ಮಾಡಿ ೮ ಎಕರೆ ಮಾವಿನ ಬೆಳೆದಿದ್ದ ರಮೇಶ್, ಈ ಬಾರಿ ಲಕ್ಷಾಂತರ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಎಲ್ಲವೂ ಕೊಚ್ಚಿಕೊಂಡು ಹೋಗಿದೆ.ಒಂದೆಡೆ ಕೊರೊನಾ ಸಂಕಟ, ಇತ್ತ ಪ್ರಕೃತಿ ಹೊಡೆತದಿಂದ ಸಂಕಷ್ಟದಲ್ಲಿರುವ ರೈತರತ್ತ ಇನ್ನಾದರೂ ಸರ್ಕಾರ ಗಮನ ಹರಿಸಬೇಕಾಗಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಗದಗ

Please follow and like us:

Related posts

Leave a Comment