ಲಿಂಗಸುಗೂರು ಕೆನರಾ ಬ್ಯಾಂಕ್ ಸೀಲ್‌ಡೌನ್..

ಲಿಂಗಸೂಗೂರು(ರಾಯಚೂರು):ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಕೋವಿಡ್-೧೯ ಪ್ರಕರಣ ವರದಿಯಾದ ಬಳಿಕ ಕೆನರಾ ಬ್ಯಾಂಕ್‌ನ ಸೀಲ್‌ಡೌನ್ ಮಾಡಲಾಗಿದ್ದು,ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸೇವೆ ಸ್ಥಗಿತಗೊಳಿಸಲಾಗಿದೆ.
ಕೇರಳ ಮೂಲದ ವ್ಯಕ್ತಿ ನಿರಂತರವಾಗಿ ಲಿಂಗಸುಗೂರು ಕೆನರಾ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡಿದ್ದಾರೆ.ಅಲ್ಲದೇ ಇವರ ಪ್ರಾಥಮಿಕ ಸಂಪರ್ಕವನ್ನು ಬ್ಯಾಂಕ್ ಸಿಬ್ಬಂದಿ ಹೊಂದಿದ್ದು, ಪರಿಣಾಮ ನಾಲ್ಕು ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಿ, ಬ್ಯಾಂಕ್‌ನ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಇನ್ನು ಕೇರಳ ಸೋಂಕಿತ ಮತ್ತು ಸರ್ಜಾಪುರ ಯುವಕ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹೀಗಾಗಿ ಇವರಿಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯನ್ನೂ ಕ್ವಾರಂಟೈನ್ ಮಾಡಿ ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳ ಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ.
ಇದೇ ವೇಳೆ ಸಾರ್ವಜನಿಕ ಆಸ್ಪತ್ರೆಗೆ ನಿತ್ಯ ೪೦೦ ರಿಂದ ೫೦೦ ಹೊರ ರೋಗಿಗಳು ಬರುತ್ತಿದ್ದರು. ಇದೀಗ ತುರ್ತು ಚಿಕಿತ್ಸೆ ಹೊರತು ಪಡಿಸಿ ಉಳಿದ ಸೇವೆ ಸ್ಥಗಿತಗೊಳಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಿ ಸೇವೆ ನಿಲ್ಲಿಸಿರುವುದರಿಂದ ಗ್ರಾಹಕರು, ರೋಗಿಗಳು ಪರದಾಡುತ್ತಿದ್ದಾರೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)

Please follow and like us:

Related posts

Leave a Comment