ವೀಳ್ಯದೆಲೆಯ ಬಳಕೆ ಹತ್ತಾರು ರೋಗಕ್ಕೆ ರಾಮಾಭಾಣ..!

ಊಟದ ನಂತರ ವೀಳ್ಯದ ಎಲೆ ಸೇವಿಸುವುದು ವಾಡಿಕೆ. ತಿಂದ ಆಹಾರ ಸುಲಭವಾಗಿ ಜೀರ್ಣಗೊಳ್ಳಲೆಂದು ಮನೆಯಲ್ಲಿ ಹಿರಿಯರು ವೀಳ್ಯದ ಎಲೆಯನ್ನು ಊಟದ ನಂತರ ದಿನ ನಿತ್ಯ ಸೇವಿಸುತ್ತಾರೆ.ಆದರೆ ವೀಳ್ಯದ ಎಲೆ ಜೀರ್ಣಕ್ರಿಯೆಗೆ ಮಾತ್ರವಲ್ಲದೆ, ಅನೇಕ ಕಾಯಿಲೆಗಳನ್ನು ಉಪಶಮನಗೊಳಿಸುವ ಶಕ್ತಿಯನ್ನೂ ಹೊಂದಿದೆ. ಜೊತೆಗೆ ನಿಮ್ಮ ಸೌಂದರ್ಯ ಹೆಚ್ಚಲು ಸಹಾಯ ಮಾಡುತ್ತದೆ. ಅದು ಹೇಗೆ ಗೊತ್ತಾ?
1)ವೀಳ್ಯದೆಲೆಯನ್ನು ಸೇವಿಸುವುದರಿಂದ ಕೂದಲು ಉದುರುವಿಕೆಯನ್ನು ತಡೆಯುತ್ತದೆ- ಕೂದಲು ಉದುರುವಿಕೆಯಂತಹ ಸಮಸ್ಯೆಗಳಿಗೆ ವೀಳ್ಯದ ಎಲೆ ಬಳಸಲು ಆಯುರ್ವೇದ ಕೂಡ ಶಿಫಾರಸ್ಸು ಮಾಡುತ್ತದೆ. ಎಳ್ಳು ಅಥವಾ ತೆಂಗಿನ ಎಣ್ಣೆಯಿಂದ ವೀಳ್ಯದ ಎಲೆಯನ್ನು ರುಬ್ಬಿ, ಆ ಪೇಸ್ಟ್ ಅನ್ನು ನೆತ್ತಿಗೆ, ಕೂದಲಿನ ಬುಡಕ್ಕೆ ಹಚ್ಚಿ. ಕನಿಷ್ಠ ಒಂದು ಗಂಟೆಯಾದರೂ ಬಿಡಿ. ನಂತರ ಶಾಂಪೂವಿನಿಂದ ತೊಳೆಯಿರಿ
2)ಹಲ್ಲು ಕೊಳೆಯದಂತೆ, ಹಾಗೂ ಸವೆಯದಂತೆ ಮತ್ತು ಒಸಡುಗಳನ್ನು ಬಲಪಡಿಸಲು ವಿಳ್ಯದಲೆಯನ್ನು ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತದೆ. ಆದ್ದರಿಂದ ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ, ತಣ್ಣಗಾದ ನಂತರ ಆ ನೀರಿನಲ್ಲಿ ನಿಮ್ಮ ಬಾಯಿಯನ್ನು ತೊಳೆಯುವುದರಿಂದ ಬಾಯಿಯಿಂದ ಬರುವ ಕೆಟ್ಟ ದುರ್ವಾಸನೆಯನ್ನು ನಿವಾರಣೆ ಮಾಡಬಹುದು.
3)ವೀಳ್ಯದ ಎಲೆಗಳಲ್ಲಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು, ಮುಖದ ಮೇಲಿರುವ ಮೊಡವೆಗಳನ್ನು ಸುಲಭವಾಗಿ ತೆಗೆದು ಹಾಕಲು ವೀಳ್ಯದ ಎಲೆ ಬಳಸಲಾಗುತ್ತದೆ. ದಿನಕ್ಕೆ ಎರಡು ಬಾರಿ ಮುಖವನ್ನು ವೀಳ್ಯದ ಎಲೆ ಕಷಾಯದಿಂದ ತೊಳೆಯುವುದರಿಂದ ಅಥವಾ ವೀಳ್ಯದ ಎಲೆಗಳು ಮತ್ತು ಅರಿಶಿನದ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿಕೊಂಡು ಒಣಗಿದ ನಂತರ ತೊಳೆಯುವುದರಿಂದ ತ್ವಚೆ ಕಲೆ ಮುಕ್ತವಾಗುವುದಲ್ಲದೆ, ಮೊಡವೆಗಳು ನಿವಾರಣೆಯಾಗುತ್ತವೆ.
4)ಸ್ನಾನದ ನೀರಿಗೆ ವೀಳ್ಯದ ಎಲೆಯ ಎಣ್ಣೆಯ ರಸ ಸೇರಿಸುವುದರಿಂದ ನಿಮಗೆ ತಾಜಾ ಭಾವನೆ ಸಿಗುತ್ತದೆ. ಅಷ್ಟೇ ಅಲ್ಲ, ದೇಹದಲ್ಲಿ ವಾಸನೆ ಉಂಟು ಮಾಡುವ ಸೂಕ್ಷ್ಮಜೀವಿಗಳನ್ನು ಕೊಲ್ಲುತ್ತದೆ. ಬಿಸಿ ನೀರಿನಲ್ಲಿ ಕೆಲವು ವೀಳ್ಯದ ಎಲೆಗಳನ್ನು ನೆನೆಸಿ ತಯಾರಿಸಿದ ಪಾನೀಯವನ್ನು ನಿಯಮಿತವಾಗಿ ಸೇವಿಸುವುದರಿಂದ, ದೇಹವನ್ನು ನಿರ್ವಿಷಗೊಳಿಸುತ್ತದೆ.
ಹಾಗಾದ್ರೆ ಮತ್ಯಾಕೇ ತಡ ಇಷ್ಟು ದಿನ ವೀಳ್ಯೆದೆಲೆ ತಿನ್ನೊದು ಅಂದ್ರೆ ಮೂಗು ಮೂರಿಯುತ್ತಿದ್ದವರು ಹೀಗಾಲಿಂದಲೇ ರಾತ್ರಿ ಊಟವಾದ ಬಳಿಕ ವೀಳ್ಯೆದೆಲೆ ತಿನ್ನುವುದನ್ನು ರೂಡಿಸಿಕೊಳ್ಳಿ ಇದರಿಂದ ನಮ್ಮ ದೇಹದ ಆರೋಗ್ಯವನ್ನು ನೀವು ಕಾಪಾಡಿಕೊಳ್ಳಬಹುದು..

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment